ಸಿಂಗ ಚಿತ್ರದ ನಂತರ ವಿಜಯ್ ಕಿರಣ್ ಹೊಸ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರಕ್ಕೆ ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳವನ್ನು ಹೂಡಲಿದ್ದು, ಫಸ್ಟ್ Rank ರಾಜು ಖ್ಯಾತಿ ಗುರುನಂದನ್ ನಾಯಕನಾಗಿ ಅಭಿನಯಿಸಲಿದ್ದಾರೆ. ಇತ್ತೀಚಿಗಷ್ಟೇ ನೂತನ ಚಿತ್ರದ ಮುಹೂರ್ತ ಸಮಾರಂಭ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.
ಲವ್ ಹಾಗೂ ಕಾಮಿಡಿ ಕಥೆ ಜಾನರ್ ನ ಕಥೆ ಇದಾಗಿರಲಿದ್ದು, ಗುರುನಂದನ್ ಗೆ ಸಾಧುಕೋಕಿಲ, ಶಿವರಾಜ್ ಕೆ.ಆರ್. ಪೇಟೆ, ಕುರಿ ಪ್ರತಾಪ್, ಕಡ್ಡಿಪುಡಿ ಚಂದ್ರು, ವಿಶ್ವ, ಶ್ರೀನಿವಾಸಪ್ರಭು ಮುಂತಾದವರು ಸಾಥ್ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು, ಸುಮಾರು 50 ದಿನಗಳ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ನಿರ್ಧರಿಸಿದೆ. ಉಳಿದಂತೆ ರಘುನಿಡುವಳ್ಳಿ ಸಂಭಾಷಣೆ, ಕವಿರಾಜ್ ಗೀತಸಾಹಿತ್ಯ, ನಟರಾಜನ್ ಶಂಕರನ್ ಸಂಗೀತ ನಿರ್ದೆಶನ, ಕಿರಣ್ ಹಂಪಾಪುರ ಛಾಯಾಗ್ರಹಣ, ಮಧು ಸಂಕಲನ, ರವಿವರ್ಮ, ಪಳನಿರಾಜ್ ಸಾಹಸ ನಿರ್ದೆಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ.