ಇದೀಗ ಬಾಲಿವುಡ್ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್ವುಡ್ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಇಂಥಾ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಈಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡಾ ಇದರ ಬಗ್ಗೆ ಬಿಡುಬೀಸಾಗಿ ಮಾತಾಡಿದ್ದಾರೆ.
ರಾಗಿಣಿ ದ್ವಿವೇದಿ ಮೀಟೂ ಅಭಿಯಾನದ ಬಗ್ಗೆ ಮಾತಾಡಿರೋದು ಹುಬ್ಬಳ್ಳಿಯಲ್ಲಿ. ಮಾಧ್ಯಮದವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ರಾಗಿಣಿ ನೇರವಾಗಿಯೇ ಉತ್ತರಿಸಿದ್ದಾರೆ. ಈ ಅಭಿಯಾನ ಹುಟ್ಟಿದ ಬಗೆ, ಅದರ ಉದ್ದೇಶಗಳ ಬಗ್ಗೆ ಗಂಭೀರವಾಗಿಯೇ ಅರಿತುಕೊಂಡಿರೋ ರಾಗಿಣಿ ಕೆಲವರು ಇದನ್ನು ಪ್ರಚಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ.
ಮೀಟೂ ಎಂಬುದು ಕಿರುಕುಳಕ್ಕೊಳಗಾದವರು ಅದಕ್ಕೆ ಕಾರಣರಾದವರ ವಿರುದ್ಧ ಸಮರ ಸಾರಲು ಹುಟ್ಟಿಕೊಂಡ ಅಭಿಯಾನ. ಇಂಥಾದ್ದೊಂದು ಧೈರ್ಯ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಮೂಲಕ ಈ ಸಮಾಜದಲ್ಲಿ ಒಂದು ಬದಲಾವಣೆಯ ಗಾಳಿ ಬೀಸುವಂತಾಗಬೇಕು. ಆದರೆ ಕೆಲ ಮಂದಿ ಇದನ್ನೇ ಸ್ವಾರ್ಥಕ್ಕೆ ಮತ್ತು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತಿದೆ. ಆದರೆ ಇಂಥಾ ಕೆಲಸದ ಮೂಲಕ ಈ ಅಭಿಯಾನವನ್ನು ದಿಕ್ಕು ತಪ್ಪಿಸಬಾರದೆಂದು ರಾಗಿಣಿ ಹೇಳಿದ್ದಾರೆ.
ಇದೆಲ್ಲ ಇರಲಿ, ರಾಗಿಣಿಯವರೇನಾದರೂ ಇಂಥಾ ಕಿರುಕುಳಕ್ಕೆ ಈಡಾಗಿದ್ದಿದೆಯಾ? ಎಂಬ ಪ್ರಶ್ನೆಗೂ ಕೂಡಾ ರಾಗಿಣಿ ಅಷ್ಟೇ ನೇರವಾದ ಉತ್ತರವನ್ನೇ ಕೊಟ್ಟಿದ್ದಾರೆ. ತಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ಈ ವರೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೂ ಆಗಿದೆ. ಆದರೆ ತನಗ್ಯಾರೂ ಅಂಥಾ ಕಿರುಕುಳ ಕೊಟ್ಟಿಲ್ಲ ಎಂದೂ ರಾಗಿಣಿ ಹೇಳಿದ್ದಾರೆ!
#
No Comment! Be the first one.