ರಾಗಿಣಿ ದ್ವಿವೇದಿ ಒಂದು ಸಂಕಟದ ಸುದ್ದಿಯನ್ನು ಜಾಹೀರು ಮಾಡಿದ್ದಾರೆ. ಸದಾ ಅವರ ಜೊತೆಗೇ ಇರುತ್ತಾ, ರಾಗಿಣಿ ಪಾಲಿಗೆ ಆತ್ಮೀಯನೂ ಆಗಿದ್ದ ಬಾಡಿಗಾರ್ಡ್ ಶಶಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ವಿಚಾರವನ್ನು ಖುದ್ದು ರಾಗಿಣಿ ಅವರೇ ಹಂಚಿಕೊಂಡು ದುಃಖ ತೋಡಿಕೊಂಡಿದ್ದಾರೆ. ಶಶಿ ನಿನ್ನೆ ರಾತ್ರಿ ತನ್ನ ಬೈಕಿನಲ್ಲಿ ಹೊರ ಹೋಗಿದ್ದವನು ಅಪಘಾತದಲ್ಲಿ ಅಸುನೀಗಿದ್ದಾನೆ. ಬೈಕ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಶಶಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಘಟನೆಯಿಂದ ರಾಗಿಣಿ ದಿಕ್ಕು ತೋಚದಂತಾಗಿದ್ದಾರೆ. ಈ ಹುಡುಗ ಶಶಿ ಹಲವಾರು ವರ್ಷಗಳ ಹಿಂದೆ ರಾಗಿಣಿ ಬಾಡಿಗಾರ್ಡ್ ಆಗಿ ಸೇರಿಕೊಂಡಿದ್ದ. ಸದಾ ಜೊತೇಗೇ ಇರುತ್ತಿದ್ದ ಈತ ರಾಗಿಣಿ ಪಾಲಿಗೆ ಸಹೋದರನಂತೆಯೇ ಆಗಿ ಹೋಗಿದ್ದ. ಹೋದಲ್ಲಿ ಬಂದಲ್ಲಿ ಪಕ್ಕದಲ್ಲೇ ಇರುತ್ತಿದ್ದ ಶಶಿಗೆ ಈಗಿನ್ನೂ ಸಣ್ಣ ವಯಸ್ಸು. ಸದಾ ಲವಲವಿಕೆಯಿಂದಿರುತ್ತಿದ್ದ ಈತ ರಾಗಿಣಿಗೆ ಮಾತ್ರವಲ್ಲ, ಅವರ ಆಪ್ತ ವಲಯಕ್ಕೂ ಅಚ್ಚುಮೆಚ್ಚಿನ ಹುಡುಗನಾಗಿದ್ದ. ಈತನ ಅನಿರೀಕ್ಷಿತ ಅಗಲಿಕೆಯಿಂದ ರಾಗಿಣಿ ಆಘಾತಗೊಂಡಿದ್ದಾರೆ.
No Comment! Be the first one.