ಜೆಂಟಲ್ ಮನ್ ಮೂಲಕ ನಿರ್ದೇಶಕರಾಗಿದ್ದ ಗುರು ದೇಶಪಾಂಡೆ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಬಡ್ತಿ ಪಡೆದಿದ್ದರು. ಸದ್ಯ ತಮ್ಮ ಎರಡನೇ ಚಿತ್ರವನ್ನು ಗುರು ದೇಶಪಾಂಡೆ ಅನೌನ್ಸ್ ಮಾಡಿದ್ದಾರೆ. ಯೆಸ್.. ಸದ್ಯ ಗುರು ದೇಶಪಾಂಡೆ ಅಜಯ್ ರಾವ್ ಮತ್ತು ಮಾನ್ವಿತಾ ಹರೀಶ್ ಕಾಂಬಿನೇಷನ್ನಿನಲ್ಲಿ ರೈನ್ ಬೋ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದ ದಿನದಂದು ನಡೆಸಲು ನಿರ್ಧರಿಸಲಾಗಿದೆ. ಕಲರ್ಸ್ ಆಫ್ ಕ್ರೈಮ್ ಈ ಚಿತ್ರದ ಟ್ಯಾಗ್ ಲೈನ್ ಆಗಿದ್ದು, ಈ ಚಿತ್ರವನ್ನು ಎಸ್. ರಾಜವರ್ಧನ್ ನಿರ್ದೇಶನ ಮಾಡುತ್ತಿದ್ದಾರೆ.
ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಪಕರಾಗಿ ತಮ್ಮ ಎರಡನೇ ಚಿತ್ರ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರದ ಮುಹೂರ್ತ ಆ.9 ರಂದು ನಡೆಯಲಿದೆ. ಗುರು ದೇಶಪಾಂಡೆ ಅವರ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ರಾಜವರ್ಧನ್ ಪ್ರಸ್ತುತ ಪ್ರಜ್ವಲ್ ದೇವರಾಜ್ ಅವರ ಜಂಟಲ್ ಮ್ಯಾನ್ ಚಿತ್ರದ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರು ದೇಶಪಾಂಡೆ ಅವರ ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರೈನ್ ಬೋ ನಿರ್ಮಾಣವಾಗುತ್ತಿದೆ.