ಅಭಿಶೇಕ್ ಅಂಬರೀಶ್ ಥರದ ಎಳೇ ಹುಡುಗರು, ಹರಿಪ್ರಿಯಾ-ವಸಿಷ್ಠ ಥರದ ಹಿರಿಯರು ಸೇರಿದಂತೆ ಅನೇಕರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ನಡುವಯಸ್ಸಿನ ರಾಜ್ ಶೆಟ್ಟಿಯಂಥವರು ಯಾವಾಗ ಮದುವೆಯಾಗುತ್ತಾರೆ?
ದಿಢೀರ್ ಅಂತಾ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಅಚ್ಛರಿ ಮೂಡಿಸಿದವರು ರಾಜ್. ಬೋಳು ತಲೆಯ ಚಿತ್ರವಿದ್ದ ಒಂದು ಮೊಟ್ಟೆಯ ಕತೆ ಅನ್ನೋ ಸಿನಿಮಾದ ಪೋಸ್ಟರು ಗೋಡೆಗಳ ಮೇಲೆ ಕಾಣಿಸಿಕೊಂಡಾಗಲೇ ʻಇದ್ಯಾರಪ್ಪಾʼ ಅಂತಾ ಜನ ಆಶ್ಚರ್ಯಗೊಂಡಿದ್ದರು. ಅದೇ ಜನ ಇಷ್ಟ ಪಟ್ಟು ನೋಡಿ ಚಿತ್ರವನ್ನು ಗೆಲ್ಲಿಸಿದರು. ಆ ನಂತರ ರಾಜ್ ತಮ್ಮದೇ ಶೈಲಿಯ ಕೆಲವಾರು ಸಿನಿಮಾಗಳನ್ನು ಮಾಡುತ್ತಾ ಮಾರ್ಕೆಟ್ ಕ್ರಿಯೇಟ್ ಮಾಡಿಕೊಂಡರು. ರಾಜ್ ಬಿ. ಶೆಟ್ಟಿ ಎನ್ನುವ ನಟ, ನಿರ್ದೇಶಕ ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಸ್ಟಾರ್ ಎಂದರೆ ನಂಬಲೇಬೇಕು. ಈ ಶೆಟ್ರು ಸಿನಿಮಾ ಶುರು ಮಾಡುತ್ತಿದ್ದಂತೇ ಟೀವಿ ಚಾನೆಲ್ಲುಗಳು ರಪಕ್ಕಂತಾ ಕೈ ಹಾಕಿ ವ್ಯಾಪಾರ ಮುಗಿಸಿಬಿಡುತ್ತವೆ.
ಮದುವೆ ವಿಚಾರವನ್ನಿಟ್ಟುಕೊಂಡು ಮೊದಲ ಸಿನಿಮಾದಲ್ಲಿ ಗೆದ್ದ ರಾಜ್ ನಿಜ ಜೀವನದಲ್ಲಿ ಯಾವಾಗ ಮದುವೆಯಾಗ್ತಾರೆ ಎನ್ನುವ ಪ್ರಶ್ನೆಗೆ ಅತಿ ಶೀಘ್ರದಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ. ರಾಜ್ ಸ್ಟಾರ್ ನಿರೂಪಕಿಯ ಜೊತೆ ಮದುವೆಯಾಗುತ್ತಾರೆ ಎನ್ನುವ ಸುಳ್ ಸುಳ್ಳು ಗಾಳಿ ಸುದ್ದಿಯೊಂದು ಹರಿದಾಡಿತ್ತು. ಅವರಿಬ್ಬರ ನಡುವೆ ಇರೋದು ತುಳು ಬಾಂಧವ್ಯ ಬಿಟ್ಟರೆ ಮತ್ತೇನಲ್ಲ ಅಂತಾ ಈಗ ಎಲ್ಲರಿಗೂ ಗೊತ್ತಾಗಿದೆ. ಹಾಗಾದರೆ ರಾಜ್ ಮದುವೆಯಾದರೆ ಯಾರನ್ನ? ಬಹುತೇಕ ಅದೂ ಸ್ಪಷ್ಟವಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಿದ್ದ ಹುಡುಗಿ ಮತ್ತು ರಾಜ್ ಬಿ ಶೆಟ್ಟಿ ಬಹುಕಾಲದಿಂದ ಪ್ರೀತಿಸುತ್ತಿದ್ದು, ಈಗ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎನ್ನುತ್ತಿದೆ ಮೂಲ. ಆದಷ್ಟು ಬೇಗ ರಾಜ್ ರಾಣಿಯ ಜೊತೆ ಸೇರಲಿ!
No Comment! Be the first one.