’ಬಾಹುಬಲಿ’ ಬ್ಲಾಕ್ಬಸ್ಟರ್ ಸರಣಿ ಸಿನಿಮಾಗಳ ನಂತರ ನಿರ್ದೇಶಕ ರಾಜಮೌಳಿ ಕೈಗೆತ್ತಿಕೊಂಡಿರುವ ’ಆರ್ಆರ್ಆರ್’ ಸದ್ದುಮಾಡುತ್ತಿದೆ. ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ತೇಜಾ ಚಿತ್ರದ ಇಬ್ಬರು ಹೀರೋಗಳು. ಇದೀಗ ಚಿತ್ರತಂಡಕ್ಕೆ ಬಾಲಿವುಡ್ ಹೀರೋ ಅಜಯ್ ದೇವಗನ್ ಸೇರ್ಪಡೆಯಾಗಿದ್ದಾರೆ. “ಚಿತ್ರಕಥೆಗೆ ತಿರುವು ನೀಡುವಂತಹ ವಿಶಿಷ್ಟ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ. ಸದ್ಯ ಅಜಯ್ ’ತಾನಾಜಿ: ದಿ ಅನ್ಸಂಗ್ ವಾರಿಯರ್’ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದ ನಂತರ ನಮ್ಮ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ” ಎನ್ನುತ್ತಾರೆ ನಿರ್ದೇಶಕ ಎಸ್.ಎಸ್.ರಾಜಮೌಳಿ.
ಅಜಯ್ ದೇವಗನ್ ಈ ಹಿಂದೆ ರಾಜಮೌಳಿ ನಿರ್ದೇಶನದ ’ಈಗ’ ಚಿತ್ರದ ಹಿಂದಿ ಅವತರಣಿಕೆ ’ಮಖ್ಖಿ’ಗೆ ಧ್ವನಿ ಕೊಟ್ಟಿದ್ದರು. ಅದೇ ವಿಶ್ವಾಸದಿಂದ ಅವರೀಗ ಮತ್ತೊಮ್ಮೆ ರಾಜಮೌಳಿಗೆ ಜೊತೆಯಾಗಿದ್ದಾರೆ. ಹಾಗೆ ನೋಡಿದರೆ ಕಮಲ ಹಾಸನ್ ನಟನೆಯ ’ಇಂಡಿಯನ್ ೨’ ತಮಿಳು ಚಿತ್ರದ ಖಳ ಪಾತ್ರಕ್ಕೆ ಅಜಯ್ರನ್ನು ಕೋರಲಾಗಿತ್ತು. ಆದರೆ ಅಜಯ್ ಅವಕಾಶವನ್ನು ಒಪ್ಪಿರಲಿಲ್ಲ. ಇದೀಗ ರಾಜಮೌಳಿ ಚಿತ್ರದೊಂದಿಗೆ ದಕ್ಷಿಣಕ್ಕೆ ಬರುತ್ತಿದ್ದಾರೆ. “ಹಿಂದಿ ಹೊರತಾಗಿ ಇತರೆ ಭಾಷಾ ಸಿನಿಮಾಗಳಲ್ಲಿ ನಟಿಸಲು ಅಜಯ್ ಸಾಮಾನ್ಯವಾಗಿ ಒಪ್ಪುವುದಿಲ್ಲ. ಇದೊಂದು ಅತಿಥಿ ಪಾತ್ರವಾದ್ದರಿಂದ ಅಜಯ್ ಒಪ್ಪಿಗೆ ಸೂಚಿಸಿದ್ದಾರೆ” ಎಂದು ಮೂಲಗಳು ಹೇಳುತ್ತವೆ. ರಾಜಮೌಳಿ ನಿರ್ದೇಶನದ ಪೀರಿಯಡ್ ಡ್ರಾಮಾ ’ಆರ್ಆರ್ಆರ್’ 300 ಕೋಟಿ ರೂಪಾಯಿ ಬೃಹತ್ ಬಜೆಟ್ನಲ್ಲಿ ಸಿದ್ಧವಾಗಲಿದೆ.
#
No Comment! Be the first one.