ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದ್ದು, ಚೆನೈಗೆ ಹಿಂತಿರುಗಿದ್ದಾರೆ. ಈ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದು, ಲೈಕಾ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ರಜನಿಕಾಂತ್ ಪುನಃ ಮೇ 29ಕ್ಕೆ ಪುನಃ ಶೂಟಿಂಗ್ ನಲ್ಲಿ ಹಿಂತಿರುಗಿದ್ದಾರೆ. ಎಲ್ಲ ಅಂದುಕೊಂಡಂತಾದರೆ 2020ರ ವೇಳೆಗೆ ಸಿನಿಮಾ ರಿಲೀಸ್ ಆಗಲಿದೆ.
ಈಗಾಗಲೇ ರಜನಿಕಾಂತ್ ಅವರ ಮುಂದಿನ ಸಿನಿಮಾ ಯಾವುದೆಂಬ ಚರ್ಚೆ ತಮಿಳು ಚಿತ್ರರಂಗದಲ್ಲಿ ಆಗುತ್ತಲೇ ಇದೆ. ಇದಕ್ಕೆ ಸದ್ಯ ಉತ್ತರ ಸಿಕ್ಕಿದ್ದು, ರಜನಿಕಾಂತ್ ದರ್ಬಾರ್ ಸಿನಿಮಾದ ನಂತರ 2021ರ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದು, ಆ ಸಂದರ್ಭದಲ್ಲಿಯೇ ಬಾಬ 2 ಸಿನಿಮಾವನ್ನು ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. 2002ರ ಅವಧಿಯಲ್ಲಿ ರಜನಿಕಾಂತ್ ಬಾಬ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಅಷ್ಟೇನೂ ಯಶಸ್ಸು ಕಾಣದೇ ಬಾಕ್ಸ್ ಆಫೀಸಿನಲ್ಲೂ ಮಕಾಡೆ ಮಲಗಿತ್ತು. ಈಗ ಅದರದೇ ಸೀಕ್ವೆಲ್ ನಲ್ಲಿ ರಜನಿ ನಟಿಸುವುದು ನಿಕ್ಕಿಯಾಗಿದ್ದು, ಚುನಾವಣೆಯ ಜತೆಗೆ ಬಾಬ 2 ಆಗಿ ಹೇಗೆ ಧೂಳೆಬ್ಬಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
No Comment! Be the first one.