ರನಿಕಾಂತ್‌ ಹಿಮಾಲಯದ ಯಾವ ಗುಹೆಯಲ್ಲಿ ತಪಸ್ಸಿಗೆ ಕೂತಿದ್ದಾರೋ? ಅವರ ಪತ್ನಿ ಯಾವ ನಿರ್ಮಾಪಕರ ಎದುರು ಕೂತು ಗಂಡನ ಪೇಮೆಂಟು ಮಾತಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇವರನ್ನು ನಂಬಿದ ಬಡಪಾಯಿ ನೌಕರರು ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಿದ್ದಾರೆ.

ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತಿದೆಯಲ್ಲಾ? ಈ ಮಾತು ಆಗಾಗ ನಿಜ ಅನ್ನಿಸುವ ಸನ್ನಿವೇಷಗಳು ಎದುರಾಗುತ್ತಿರುತ್ತವೆ.

ಸುದೀಪ್‌, ಯಶ್ ಥರದ ಕೆಲವೇ ವ್ಯಕ್ತಿಗಳು ಮಾತ್ರ ಯಾವ ಪ್ರಚಾರವನ್ನು ಬಯಸದೆ ಕಷ್ಟದಲ್ಲಿರುವರ ಕೈ ಹಿಡಿಯುವ ಕೆಲಸ ಮಾಡುತ್ತಾರೆ. ಮಿಕ್ಕಂತೆ ಭಾರತದ ಯಾವ ಸೂಪರ್‌ ಸ್ಟಾರ್‌ ಕೂಡಾ ಸುಖಾಸುಮ್ಮನೆ ಯಾರಿಗೂ ನೆರವಾಗುವುದಿಲ್ಲ. ಹಾಗೇನಾದರೂ ದಾನ ಅಂತಾ ಮಾಡಿದರೂ ಅದು ತಮ್ಮ ಇನ್‌ ಕಂ ಟ್ಯಾಕ್ಸ್‌ ಕಡಿತಗೊಳಿಸುವ ಕಾರಣದಿಂದ ನೆಪಕ್ಕಷ್ಟೇ ಕೊಡೋದು. ಚಿಟಿಕೆಯಷ್ಟು ದಾನ ಮಾಡಿ ಮಣಗಾತ್ರದ ಪಬ್ಲಿಸಿಟಿ ಪಡೆಯುವ ನಟರೂ ಇಲ್ಲಿದ್ದಾರೆ. ಇನ್ನು ಕೆಲವು ಹೀರೋಗಳಿದ್ದಾರೆ, ತಮ್ಮ ಸುತ್ತ ಇರುವ ಸೇರು, ಪಾವು, ಚಟಾಕುಗಳಿಗೆ ಎಣ್ಣೆ ಹೊಡೆಸೋದು ಬಿಟ್ಟರೆ, ಅವರ ಅರಿದುಹೋದ ಕಾಚಾ ಖರೀದಿಸಲೂ ಇವರು ಕಾಸು ಬಿಚ್ಚೋದಿಲ್ಲ. ಕನ್ನಡದ ಸ್ಟಾರ್‌ ಗಳ ದಾನ-ಧರ್ಮದ ಹೇಳೋದು ಬೇಕಾದಷ್ಟಿದೆ.  ಆದರೆ, ಈಗ ಹೇಳ ಹೊರಟಿರುವುದು ಜಗತ್ತಿನಾದ್ಯಂತ ಅಗಣಿತ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ ಸ್ಟಾರ್‌ ರಜನಿ ಕುಟುಂಬದ ಯೋಗ್ಯತೆಯ ಬಗ್ಗೆ!

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಜನ ಕೊಡುಗೈ ದಾನಿ, ದಾನಶೂರ ಮುಂತಾದ ಬಿರುದುಗಳಿಂದ ಹೊಗಳುತ್ತಾರೆ.‌ ಇವರ ಸರಳತೆಯ ಬಗ್ಗೆ ದಂತಕತೆಗಳೂ ಸಾಕಷ್ಟಿವೆ.

ಆದರೆ, ರಜನಿ ಪತ್ನಿ ಲತಾ ನಡೆಸತ್ತಿರುವ ದಿ. ಆಶ್ರಮ್‌ ಸ್ಕೂಲ್‌ ನಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸರಿಯಾದ ಸಂಬಳ ನೀಡಿಲ್ಲ. ಪಾಠ ಮಾಡುವ ಶಿಕ್ಷಕರಿಗಿರಲಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರೈವರ್‌ ಗಳು ಮತ್ತು  ಆಯಾಗಳಿಗೂ ನಾಲ್ಕಾರು ತಿಂಗಳಿನಿಂದ ಸಂಬಳ ನೀಡದೇ ಸತಾಯಿಸಿದ್ದಾರೆ. ಕೇಳಿದರೆ, ನೋಟ್‌ ಬ್ಯಾನ್‌, ಚಂಡಮಾರುತ, ಕೊರೋನಾ, ಲಾಕ್‌ ಡೌನ್‌ ಗಳ ನೆಪ ಹೇಳುತ್ತಿದ್ದಾರಂತೆ.

ಚೆನ್ನೈನ ಗಿಂಡಿಯಲ್ಲಿರುವ ಈ ಶಾಲೆಯ ಕಟ್ಟಡದ ಬಾಡಿಗೆಯನ್ನೂ ನೀಡಿಲ್ಲ. ವರ್ಷಗಟ್ಟಲೆ ಬಾಡಿಗೆ ಕೊಡದಿದ್ದರೆ ಯಾರು ತಾನೆ ಸುಮ್ಮನಿರುತ್ತಾರೆ. ಆ ಕಟ್ಟಡದ ಮಾಲೀಕ ವೆಂಕಟೇಶ್ವರಲು ಶಾಲೆಗೆ ಬೀಗ ಹಾಕುವ ಹಂತಕ್ಕೆ ತಲುಪಿದ್ದಾನೆ. ಸಂಬಳವಿಲ್ಲದೆ ತಿಂಗಳುಗಟ್ಟಲೆ ಕಾದ ನೌಕರರು ಶಾಲೆಯ ಆವರಣದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಯಾರೂ ಏನೇ ಮಾಡಿದರೂ ಆಶ್ರಮ್‌ ಶಾಲೆಯ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ತಾವು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ ʻಯಾವ ಗಾಳಿ ಸುದ್ದಿಗೂ ಕಿವಿಗೊಡಬೇಡಿ. ಎಲ್ಲ ಆರೋಪಗಳೂ ಸತ್ಯಕ್ಕೆ ದೂರವಾದವುʼ ಎಂದಷ್ಟೇ ಹೇಳಿ ಸುಮ್ಮನಾಗಿದೆ.

ಈ ವಿಚಾರದ ಬಗ್ಗೆ ರಜನಿ ಪತ್ನಿ ಲತಾ  ಅವರನ್ನೇ ಕೇಳಲು ಮಾದ್ಯಮಗಳು ಪ್ರಯತ್ನಿಸಿದರೂ ಅದು ಫಲಕಾರಿಯಾಗುತ್ತಿಲ್ಲ. ಲತಾ ರಜನೀಕಾಂತ್‌ ಯಾರ ಕರೆಯನ್ನೂ ಸ್ವೀಕರಿಸದೇ ಆಟವಾಡುತ್ತಿದ್ದಾರೆ.

ರನಿಕಾಂತ್‌ ಹಿಮಾಲಯದ ಯಾವ ಗುಹೆಯಲ್ಲಿ ತಪಸ್ಸಿಗೆ ಕೂತಿದ್ದಾರೋ? ಅವರ ಪತ್ನಿ ಯಾವ ನಿರ್ಮಾಪಕರ ಎದುರು ಕೂತು ಗಂಡನ ಪೇಮೆಂಟು ಮಾತಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇವರನ್ನು ನಂಬಿದ ಬಡಪಾಯಿ ನೌಕರರು ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಿದ್ದಾರೆ.

ದೊಡ್ಡವರನ್ನು ನಂಬಿದರೆ ಕನಿಷ್ಟ ಅನ್ನಾಹಾರಕ್ಕೂ ಗತಿ ಇಲ್ಲದೆ ಸಾಯಬೇಕು ಅನ್ನೋದನ್ನು ರಜನೀ ಫ್ಯಾಮಿಲಿ ನಿಜವಾಗಿಸುತ್ತಿದೆ…!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸಹಾಯಕ್ಕೆ ನಿಂತವರೂ ತಲೆ ತಗ್ಗಿಸಬೇಕಲ್ಲ….

Previous article

ಶಿವನ ಪಾದದಲ್ಲೇನಿದೆ?

Next article

You may also like

Comments

Leave a reply

Your email address will not be published.