- ಕನ್ನಡ ಚಿತ್ರಲೋಕದ ಏಕೈಕ ಚಿರಂಜೀವಿ ಮತ್ತು ದಂತಕಥೆಯೂ ಎನಿಸಿಕೊಂಡರು.
- ಅಭಿಮಾನಿಗಳನ್ನು ‘ದೇವರು’ ಎಂದು ಕರೆದ ನಂತರ ಅವರಿಂದಲೆ ದೇವಾಲಯ ಕಟ್ಟಿಸಿಕೊಂಡ ದೇವರು.
- ತಮಿಳು ಖ್ಯಾತಿಯ ದಿ||ಶಿವಾಜಿಗಣೇಶನ್ ಉವಾಚ “ರಾಜ್ಗೆ ಎಲ್ಲ ರೀತಿಯಲ್ಲೂ ಸಾಟಿ, ರಾಜ್ ಮಾತ್ರ”
- ‘ನಾನು, ನನ್ನಂಥವರು ಡಾ||ರಾಜ್ರವರಿಂದ ಕಲಿಯುವುದು ಬಹಳಷ್ಟಿದೆ’ – ದಿ||ಸಂಜೀವ್ಕುಮಾರ್
- ‘ಅಭಿನಯದಲ್ಲಿ ಒಮ್ಮೊಮ್ಮೆ : ನಾನು ಅಣ್ಣನಾದರೆ ರಾಜ್ಕುಮಾರ್ ನನ್ನ ತಮ್ಮನಾಗುತ್ತಾರೆ ಮತ್ತು ನಾನು ತಮ್ಮನಾದರೆ ರಾಜ್ಕುಮಾರ್ ನನ್ನ ಅಣ್ಣನಾಗುತ್ತಾರೆ’ – ದಿ||ಎನ್.ಟಿ.ರಾಮರಾವ್
- ‘ಕನ್ನಡ ಭಾಷೆ ಉಚ್ಚಾರಣೆಯನ್ನು ರಾಜ್ ಅವರಿಂದ ಕಲಿಯಬೇಕು’ – ಕನ್ನಡ ವಿದ್ವಾಂಸರುಗಳು
- ‘ಯಾವುದೇ ಪಾತ್ರಗಳ ಪರಕಾಯ ಪ್ರವೇಶ ಮಾಡುವುದರಲ್ಲಿ ಅಗ್ರಗಣ್ಯ’ – ದಿ|| ಹೆಚ್.ಎಲ್.ಎನ್. ಸಿಂಹ
- ಸರಳ-ಸಜ್ಜನಿಕೆಯ ಸಾಗರ, ನಡೆ-ನುಡಿಯ ನಿಸ್ಸೀಮ, ಸಹಜ ಭಾವುಕದ ಸಹನಾ ಮೂರ್ತಿ, ಕೃತಜ್ಞಾ ಪೂರ್ಣ ಮಾನವ ಹಾಗೂ ತುಂಬಿದ ಕೊಡ – ಕು.ವೆಂ.ಪು.
- 1 ವರ್ಷಾವಧಿಯಲ್ಲಿ 2 ಬಾರಿ ಅತ್ಯಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು {1963-ಒಟ್ಟು 22 ಚಿತ್ರಗಳ ಪೈಕಿ ಹದಿನೈದು ಮತ್ತು 1968-ಒಟ್ಟು 31 ಚಿತ್ರಗಳ ಪೈಕಿ ಹದಿನೈದು} ಹಾಗೂ 2 ಬಾರಿ ಅತ್ಯಂತ ಕಡಿಮೆ ಚಿತ್ರಗಳಲಿ ನಟಿಸಿದ್ದು {1975: ಒಟ್ಟು 30 ಚಿತ್ರಗಳ ಪೈಕಿ ಎರಡು ಮತ್ತು 1979: ಒಟ್ಟು 44 ಚಿತ್ರಗಳ ಪೈಕಿ ಎರಡು} ಸಾರ್ವಕಾಲಿಕ ದಾಖಲೆ.
- [1954-68] 14 ವರ್ಷಾವಧಿಯಲ್ಲಿ ಕನ್ನಡ ಚಿತ್ರರಂಗದ ಪ್ರಪ್ರಥಮ ಶತಚಿತ್ರನಾಯಕ ನಟ.
- ಇವರು ನಟಿಸಿದ್ದ ‘ಮಯೂರ’ ಅತ್ಯಂತ ವೆಚ್ಚದ ಪ್ರಪ್ರಥಮ ಕನ್ನಡ ಚಿತ್ರ.
- ಇವರ ಒಟ್ಟು 210 ಚಿತ್ರಗಳಲ್ಲಿ ಯಾವೊಂದು ಚಿತ್ರಕ್ಕೂ ‘0’[ವಯಸ್ಕರಿಗೆ ಮಾತ್ರ] ಸರ್ಟಿಫಿಕೇಟ್ ಇರುವುದಿಲ್ಲ.
- ಇವರ ‘ಬಂಗಾರದ ಮನುಷ್ಯ’ 2 ವರ್ಷ ಸತತ ಪ್ರದರ್ಶನ ಕಂಡ ಪ್ರಪ್ರಥಮ ಕನ್ನಡ ಚಿತ್ರ.
- ‘ಇಂಡಿಯನ್ ಜೇಮ್ಸ್ ಬಾಂಡ್’ ಸೀರಿಯಲ್ ಚಿತ್ರಗಳ ಪ್ರಪ್ರಥಮ ನಾಯಕ ನಟ.
- ಅಮೆರಿಕದ ‘ಕೆಂಚುಕಿ ಕರ್ನಲ್ ಪ್ರಶಸ್ತಿ’ ಪುರಸ್ಕೃತ ಭಾರತದ ಪ್ರಪ್ರಥಮ ನಟ.
- ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದ ಪ್ರಪ್ರಥಮ ನಟ.
- ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ‘ತ್ರಿಪಾತ್ರ’ ನಿರ್ವಹಿಸಿದ ಪ್ರಪ್ರಥಮ ನಟ.
- ಭಾರತದ ಚಿತ್ರರಂಗದಲ್ಲೇ ಪ್ರಪ್ರಥಮ ರಿಜಿಸ್ಟರ್ಡ್ ಸಂಘವೊಂದು ಅಸ್ತಿತ್ವಕ್ಕೆ ಬಂದುದ್ದು ‘ರಾಜ್ ಅಭಿಮಾನಿಗಳ ಸಂಘ’.
- ಬಿರುದು ಬಾವಲಿಗಳಲ್ಲಿಯೂ ಅಪ್ರತಿಮ ದಾಖಲೆಯುಳ್ಳ ನಟ:- ವರನಟ, ನಟಸಾರ್ವಭೌಮ, ರಸಿಕರ ರಾಜ, ಕನ್ನಡ ಕಂಠೀರವ, ಗಾನ ಗಂಧರ್ವ, ಕೆಂಚುಕಿ ಕರ್ನಲ್, ಮ್ಯಾಟಿನಿ ಐಡಲ್, ಡಾಕ್ಟರ್, ಕನ್ನಡ ಕಣ್ಮಣಿ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪುರಸ್ಕೃತ, ಅಭಿಮಾನಿ ದೇವರು, ಇತ್ಯಾದಿ.
- ಐವತ್ತಕ್ಕೂ ಹೆಚ್ಚು ನಾಯಕ ನಟಿಯರೊಡನೆ ಅಭಿನಯಿಸಿದ ಪ್ರಪ್ರಥಮ ನಾಯಕ ನಟ.
No Comment! Be the first one.