ಪ್ರಜ್ವಲ್‌ ದೇವರಾಜ್‌ ನಟನೆಯ ಈ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ರಾಜಶ್ರೀ ಸೆಟ್‌ಗೆ ಹೋಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಅವರ ನಟನೆಯ ದೃಶ್ಯಗಳ ಚಿತ್ರೀಕರಣ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.


ಡೈನಾಮಿಕ್ ಪ್ರಿನ್ಸ್ ಹೊಸ ಸಿನಿಮಾವನ್ನು ಮಾಡುತ್ತಿದ್ದು, ರಾಜಶ್ರೀ ಪ್ರಜ್ವಲ್ ದೇವರಾಜ್ ಗೆ ಸಾಥ್ ನೀಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಚಿತ್ರದಲ್ಲಿ ಲಾಯರ್ ಮಗಳಾಗಿ ರಾಜಶ್ರೀ ಪಕ್ಕದ ಮನೆಯ ಹುಡುಗಿಯಂಥಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೂ ರಾಜಶ್ರೀಯನ್ನು ಗ್ಲಾಮರಸ್ ಬ್ಯೂಟಿಯಾಗಿ ಕಲ್ಪಿಸಿಕೊಂಡಿರುವ ವೀಕ್ಷಕರಿಗೆ ಹೊಸಾನುಭವ ನೀಡುವ ಸಿನಿಮಾ ಇದಾಗಿರಲಿದೆ. ಹ್ಯಾಪಿ ನ್ಯೂ ಯಿಯರ್‌ ಚಿತ್ರದಲ್ಲಿ ನಟಿಸಿದ ನಂತರ ತಮಿಳು ಚಿತ್ರಕ್ಕೆ ಸಹಿ ಮಾಡಿದ ಅವರು, ಕಾಲಿವುಡ್‌ನಲ್ಲಿ ಬಿಝಿಯಾಗಿದ್ದರು. ಈಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟನೆಯ ಜತೆ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಾಜಶ್ರೀ ಕಳೆದ ವರ್ಷ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ಕೊಡಗಿನ ಸಂತ್ರಸ್ತರಿಗಾಗಿ ಶ್ರಮವಹಿಸಿದ್ಧಾರೆ.

 

CG ARUN

ದೊಡ್ಡ ಬಜೆಟ್ ನಲ್ಲಿ ತಯಾರಾಗಿದೆ ಮಕ್ಕಳ ಸಿನಿಮಾ!

Previous article

ಪೊಗರು ಪ್ರೋಮೋ ಸಾಂಗ್ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *