ಬೆಂಗಳೂರಿನ ಚಂದ್ರಾ ಲೇಔಟ್ ಗೆ ಬಂದು ನಿರ್ದೇಶಕ ರಾಕಿಯನ್ನು ಅನಾಮತ್ತಾಗಿ ಎತ್ತಾಕಿಕೊಂಡು ಹೋಗಿದ್ದ ನೆಲಮಂಗಲದ ಪೊಲೀಸ್ ಠಾಣೆಯ ಕ್ರೈಂ ಪಿಸಿ ಕೇಶವ್ ಮತ್ತು ಎಸ್ಸೈ ಮಂಜುನಾಥ ಸೆಲ್ಲಿನಲ್ಲಿ ಕೂರಿಸಿ ಒಂದಿಡೀ ದಿನ ಕಾಟ ಕೊಟ್ಟು, ಬೆದರಿಕೆಯೊಡ್ಡಿದ್ದರು. ಈ ಬಗ್ಗೆಸಿನಿಬಜ಼್ ವಿಸ್ತೃತ ವರದಿ ಮಾಡಿತ್ತು.
ಸರಿಸುಮಾರು ಒಂದೂವರೆ ವರ್ಷಕ್ಕೆ ಮುಂಚೆ ʻಪತಿ ಬೇಕು ಡಾಟ್ ಕಾಮ್ʼ ಎನ್ನುವ ಸಿನಿಮಾ ತೆರೆಗೆ ಬಂದಿತ್ತು. ನಿರೂಪಕಿ ಶೀತಲ್ ಶೆಟ್ಟಿ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ನಿರ್ದೇಶಕ ರಾಕೇಶ್ ಸೇರಿದಂತೆ ಮೂರು ಜನ ಪಾಲುದಾರಿಕೆಯಲ್ಲಿ ನಿರ್ಮಿಮಿಸದ್ದರು. ಅಂದುಕೊಂಡ ಮಟ್ಟಿಗೆ ಚಿತ್ರ ಗೆಲುವು ಕಾಣಲಿಲ್ಲ. ಇದಾಗುತ್ತಿದ್ದಂತೇ ಮೂವರು ಪಾಲುದಾರರಲ್ಲಿ ಮಂಜುನಾಥ ಎಂಬಾತನ ವರಾತ ಶುರುವಾಗಿತ್ತು. ಸಿನಿಮಾ ಆರಂಭಕ್ಕೆ ಮುಂಚೆಯೇ ‘ಸಿನಿಮಾದಲ್ಲಿ ನಷ್ಟವೇನೇ ಇದ್ದರೂ ಅದಕ್ಕೆ ಸ್ವತಃ ನಾವೇ ಹೊಣೆಗಾರರು. ಲಾಭದಲ್ಲೂ ಸಮಾನ ಹಂಚಿಕೆಯಿರುತ್ತದೆ ಎಂಬುದಾಗಿ ಅಗ್ರಿಮೆಂಟು ಮಾಡಿಸಿದ್ದರು. ಆದರೆ ಮಂಜುನಾಥ ಮಾತ್ರ ಯಾವ ನಿಬಂಧನೆಗಳನ್ನು ನಿಯಮವಾಗಿ ಪಾಲಿಸಲೇ ಇಲ್ಲ.
ಸಿನಿಮಾ ಬಿಡುಗಡೆಯಾಗಿ ನಷ್ಟವಾಗುತ್ತಿದ್ದಂತೇ ಮಂಜುನಾಥ ಸಿನಿಮಾದ ರೈಟ್ಸುಗಳನ್ನು ಬರೆದುಕೊಡಿ ಅಂತಾ ಕುಂತ. ಹಾಕಿದ ಹಣವನ್ನೂ ವಾಪಾಸು ಕೇಳಿದ್ದ. ಅಂದುಕೊಂಡಿದ್ದನ್ನು ಸಾಧಿಸಲು ಆಗದಿದ್ದಾಗ ನೆಲಮಂಗಲ ಟೌನ್ ಪೊಲೀಸರನ್ನು ಬುಕ್ ಮಾಡಿದ್ದ. ಬೆಂಗಳೂರಿನ ಚಂದ್ರಾ ಲೇಔಟ್ ಗೆ ಬಂದು ನಿರ್ದೇಶಕ ರಾಕಿಯನ್ನು ಅನಾಮತ್ತಾಗಿ ಎತ್ತಾಕಿಕೊಂಡು ಹೋಗಿದ್ದ ನೆಲಮಂಗಲದ ಪೊಲೀಸ್ ಠಾಣೆಯ ಕ್ರೈಂ ಪಿಸಿ ಕೇಶವ್ ಮತ್ತು ಎಸ್ಸೈ ಮಂಜುನಾಥ ಸೆಲ್ಲಿನಲ್ಲಿ ಕೂರಿಸಿ ಒಂದಿಡೀ ದಿನ ಕಾಟ ಕೊಟ್ಟು, ಬೆದರಿಕೆಯೊಡ್ಡಿದ್ದರು. ಈ ಬಗ್ಗೆಸಿನಿಬಜ಼್ ವಿಸ್ತೃತ ವರದಿ ಮಾಡಿತ್ತು.
ಈ ವಿಚಾರವಾಗಿ ರಾಕೇಶ್ ಖ್ಯಾತ ವಕೀಲ ವೇದಮೂರ್ತಿಯವರ ಮೂಲಕ ಕಾನೂನಿನ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಪಿಎಸ್ ಐ ಮಂಜುನಾಥ್ ಮತ್ತು ಕೇಶವ್ ಮತ್ತು ನಿರ್ಮಾಪಕ ಮಂಜುನಾಥ್ಗೆ ಬಂಧನದ ವಾರಂಟ್ ಜಾರಿ ಮಾಡುವಂತೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಆದೇಶ ನೀಡಿತ್ತು. ಸದ್ಯ ಇವರಿಬ್ಬರೂ ಜಾಮೀನು ಪಡೆದಿದ್ದಾರೆ ಎನ್ನುವ ಮಾಹಿತಿಯಿದೆ.
ಇವೆಲ್ಲಾ ಏನೇ ಆಗಲಿ, ತಾವು ಮಾಡದ ತಪ್ಪಿನಿಂದ ವೇದನೆ ಅನುಭವಿಸಿದ್ದ ರಾಕೇಶ್ ಪೊಲೀಸರ ವಿರುದ್ಧವೇ ಸಮರ ಸಾರಿದ್ದರು. ನ್ಯಾಯಾಲಯದ ಆದೇಶ ರಾಕೇಶ್ ಅವರ ಆ ಹೋರಾಟಕ್ಕೆ ಮೊದಲ ಹಂತರ ಗೆಲುವು ತಂದುಕೊಟ್ಟಿದೆ.