ಬಾಲಿವುಡ್ ನ ವಿವಾದಿತ ನಟಿ ರಾಖಿ ಸಾವಂತ್ ವಿವಾದಗಳ ಹೊರತಾಗಿ ಬದುಕುವ ಹಂಬಲವಿಲ್ಲದವರು. ಸದಾ ಒಂದಿಲ್ಲೊಂದು ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವ ರಾಖಿ ಸದ್ಯ ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ.
https://www.instagram.com/p/B1ipbmPHLrL/?utm_source=ig_web_copy_link
ಯೆಸ್.. ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ನಿಧನರಾದ ಬೆನ್ನಲ್ಲೇ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಆ ವಿಡಿಯೋದಲ್ಲಿ ಅವರು, ಅರುಣ್ ಜೇಟ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ ಜೇಟ್ಲಿ ಅವರ ನಿಧನದ ವಿಷಯ 10 ದಿನಗಳ ಮೊದಲೇ ತಿಳಿದಿತ್ತು ಎಂದು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. ನಾನು ಒಂದು ವಾರ ಮೊದಲು ಅಲ್ಲ 10 ದಿನದ ಮೊದಲೇ ಹೇಳಿದ್ದೆ. ನನಗೆ ಕೆಲವು ಬಾರಿ ಈ ರೀತಿಯ ಕನಸುಗಳು ಬರುತ್ತದೆ. ನನಗೆ ಮೊದಲೇ ಈ ವಿಷಯಗಳು ತಿಳಿಯುತ್ತದೆ. ಹೇಗೆ ಎಂದು ಗೊತ್ತಿಲ್ಲ. ಆದರೆ ಇದು ದೇವರ ಶಕ್ತಿ. ಈ ರೀತಿಯ ಶಕ್ತಿ ನೀಡಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.