ಅಣ್ಣನ ಸುಖ ಸಂತೋಷಕ್ಕಾಗಿ ಸದಾ ಹಂಬಲಿಸುವ ತಂಗಿ, ತಂಗಿಯ ಶ್ರೇಯಸ್ಸಿಗಾಗಿ ಹಾತೊರೆಯುವ ಅಣ್ಣ, ಒಬ್ಬರಿಗೊಬ್ಬರ ಮಾಡುವ ತ್ಯಾಗ, ಈ ಮಧ್ಯೆ ಉಂಟಾಗುವ ನೋವು, ನಲಿವು- ಇತ್ಯಾದಿ ಸೀನುಗಳು ಎಂತವರ ಕಣ‍್ಣಿನಲ್ಲಿ ಕಂಬನಿ ಬಾರದೇ ಇರಲಿಕ್ಕಿಲ್ಲ.  ಅಂತಹುದೇ ಹೊಸ ಕಥಾ ಹಂದರವನ್ನಿಟ್ಟುಕೊಂಡು ಕಲರ್ಸ್ ಕನ್ನಡ ರಕ್ಷಾಬಂಧನ ಎಂಬ ಹೊಸ ಧಾರವಾಹಿಯನ್ನು ಸಿದ್ಧಪಡಿಸಿದ್ದು, ಇಂದಿನಿಂದ ಪ್ರಸಾರವಾಗಲಿದೆ. ಹೌದು ಇಂದು ರಾತ್ರಿ 9.30ಕ್ಕೆ ರಕ್ಷಾಬಂಧನ್ ಧಾರವಾಹಿ ಪ್ರಸಾರವಾಗಲಿದ್ದು, ಕಾರ್ತಿಕ್ ಮತ್ತು ನಂದಿನಿ ಅಣ್ಣ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Raksha Bandhana

ನಾಲ್ಕು ಹೃದಯಗಳಾದ್ರೂ, ಒಂದೇ ರಕ್ತದ ನಂಟು.. ರಕ್ಷಾಬಂಧನ'ರಕ್ಷಾ ಬಂಧನ' | ಇಂದಿನಿಂದ ರಾತ್ರಿ 9:30ಕ್ಕೆ#RakshaBandhana #ColorsKannada

Gepostet von Colors Kannada am Montag, 22. Juli 2019

ಮೊದಲು ಅಣ್ಣನ ಮ್ಯಾರೇಜ್ ಆಗಬೇಕೆಂದು ಬಯಸುವ ತಂಗಿ, ತಂಗಿಯ ಮದುವೆಯಾದರೆ ನನ್ನ ಜವಾಬ್ದಾರಿ ಮುಗಿಯಿತು ಎಂದು ಬಯಸುವ ಅಣ್ಣ. ಈ ಮಧ್ಯೆ ಅಣ್ಣ ತಂಗಿಯರ ಮದುವೆ ಅವರಿಬ್ಬರ ಲೈಫಿನಲ್ಲಿ ಮತ್ತೆ ಇನ್ನಾವ ಬದಲಾವಣೆ ತರುತ್ತದೆ ಎಂಬುದು ರಕ್ಷಾ ಬಂಧನದ ಎಳೆ.   ಇನ್ನು ವಿಶೇಷವೆಂದರೆ ಸಾಕಷ್ಟು ದಿನಗಳ ನಂತರ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ರಕ್ಷಾ ಬಂಧನದ ಟೈಟಲ್ ಸಾಂಗನ್ನು ಹಾಡಿದ್ದಾರೆ. ಈ ಗೀತೆಯನ್ನು ರೋಹಿತ್ ಪದಕಿ ಬರೆದಿದ್ದಾರೆ. ಈ ಧಾರವಾಹಿಯನ್ನು ಗಾಂಧಾರಿ ಖ್ಯಾತಿಯ ಜಗನ್ ನಿರ್ಮಾಣ ಮಾಡುತ್ತಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕಿರುತೆರೆಗೆ ಕಾಲಿಟ್ಟ ಶಾನ್ವಿ ಶ್ರೀವಾತ್ಸವ್!

Previous article

ಜುಲೈ 24ಕ್ಕೆ ನನ್ನ ಪ್ರಕಾರದ ಹಾಡು ರಿಲೀಸ್!

Next article

You may also like

Comments

Leave a reply

Your email address will not be published.