ಬೆಲ್ಲಂಕೊಂಡ ಶ್ರೀನಿವಾಸ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ರಾಕ್ಷಸುಡು. ಸಾಕಷ್ಟು ದಿನಗಳಿಂದ ಪೋಸ್ಟರ್ ನಿಂದಲೇ ಬಹಳಷ್ಟು ಸದ್ದು ಮಾಡುತ್ತಿರುವ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಯೆಸ್.. ಕೌಟುಂಬಿಕ, ಥ್ರಿಲ್ಲರ್, ಸಸ್ಪೆನ್ಸ್ ಕಥಾಹಂದರವನ್ನು ಹೊಂದಿರುವ ರಾಕ್ಷಸುಡು ಇದೇ ಆಗಸ್ಟ್ 2ರಂದು ಬಿಡುಗಡೆಯಾಗಲಿದೆ. ಈ ವಿಚಾರವನ್ನು ಬೆಲ್ಲಂಕೊಂಡ ಶ್ರೀನಿವಾಸ್ ರವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
https://twitter.com/BSaiSreenivas/status/1148608487422775298
ಚಿತ್ರದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಪೊಲೀಸ್ ಅಧಿಕಾರಿಯಾಗಿ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಖಡಕ್ಕಾಗಿ ಮಿಂಚಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಅನುಪಮಾ ಪರಮೇಶ್ವರನ್ ಜತೆಯಾಗಿದ್ದಾರೆ. ಕಳೆದ ವರ್ಷ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದ ರಾತಚಸನ್ ಎಂಬ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿತ್ತು. ತಮಿಳಿನಲ್ಲಿ ವಿಷ್ಣು ವಿಶಾಲ್ ಗೆ ಜೋಡಿಯಾಗಿ ಅಮಲಾ ಪವಲ್ ನಟಿಸಿದ್ದರು.
Comments