ಇಡೀ ರಾಜ್ಯದ ತುಂಬಾ ಸುದ್ದಿಯಾಗುವಂತೆ ಅದ್ದೂರಿಯಾಗಿ ರಶ್ಮಿಕಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ಗಳು… ಇದೆಲ್ಲದರಿಂದ ಕಂಗೆಟ್ಟಿರೋ ರಕ್ಷಿತ್ ನೆಮ್ಮದಿ ಅರಸಿಕೊಂಡು ವಿದೇಶದತ್ತ ತೆರಳಿದರಾ? ಇಂಥಾದ್ದೊಂದು ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿಯೂ ಹುಟ್ಟಿಕೊಂಡಿದೆ.
ರಕ್ಷಿತ್ ಶೆಟ್ಟಿ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಬ್ಯಾಂಕಾಕ್ಗೆ ತೆರಳಿದ್ದಾರೆ. ಅಲ್ಲಿಯೇ ಒಂದಷ್ಟು ಸ್ಥಳಗಳಿಗೆ ಭೇಟಿ ನೀಡಿ ನಿರಾಳವಾಗೋ ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ. ಹೀಗೊಂದು ಸುದ್ದಿ ಎಲ್ಲೆಡೆ ಹರಡಿಕೊಂಡಿದೆ. ಸದ್ಯದ ವಾತಾವರಣವೂ ಈ ಸುದ್ದಿಯನ್ನು ಪುಷ್ಟೀಕರಸುವಂತಿದೆ.
ಸದ್ಯದಲ್ಲಿಯೇ ಎಲ್ಲ ವಿಚಾರಗಳೂ ಬಯಲಾಗಲಿವೆ ಎಂಬರ್ಥದ ಹೇಳಿಕೆಯನ್ನು ಹೊರತಾಗಿಸಿ ಬೇರ್ಯಾವ ನಿಖರ ಉತ್ತರಗಳೂ ರಕ್ಷಿತ್ ಕಡೆಯಿಂದ ಬಂದಿಲ್ಲ. ಆದರೆ ಈ ಬಗ್ಗೆ ರಕ್ಷಿತ್ ಡಿಪ್ರೆಸ್ ಮೂಡಿಗೆ ಜಾರಿರೋದಂತೂ ನಿಜ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವಾರು ಗೆಳೆಯರು ರಕ್ಷಿತ್ ಪರವಾಗಿ ಮಾತಾಡಿದರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬ್ರೇಕಪ್ ಸುದ್ದಿ ರೆಕ್ಕೆ ಪುಕ್ಕದ ಸಮೇತ ಹಾರಾಡುತ್ತಿದೆ.
ಇಂಥಾದ್ದರಿಂದ ರಕ್ಷಿತ್ ಅದೆಷ್ಟು ಕಂಗಾಲಾಗಿದ್ದರೆಂದರೆ ಅವರು ವಾರದ ಹಿಂದೆ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದರು. ಇದೀಗ ಬ್ರೇಕಪ್ ಬಗ್ಗೆ ನಿಖರವಾದ ಹೇಳಿಕೆ ನೀಡಲೇ ಬೇಕಾದ ಅನಿವಾರ್ಯತೆ ರಕ್ಷಿತ್ಗಿದೆ. ಈ ಬಗ್ಗೆ ಯಾವ ನಿಧಾರ ತಳೆಯೋದೆಂಬ ಆಲೋಚನೆಯ ಅಜೆಂಡಾವನ್ನೂ ಕೂಡಾ ರಕ್ಷಿತ್ ಅವರ ವಿದೇಶ ಪ್ರವಾಸ ಹೊಂದಿರುವಂತಿದೆ!
#