ಸಾಮಾನ್ಯವಾಗಿ ನಟಿಮಣಿಯರ ಲಿಪ್ ಲಾಕ್ ಸೀನುಗಳು ಈಗೀಗ ಸಾಕಷ್ಟು ಸುದ್ದಿಯಾಗುತ್ತವೆ. ಸಾಕಷ್ಟು ನಟಿಮಣಿಯರು ಇದೇ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಸಿಕೊಳ್ಳುವ ಸ್ಥಿತಿಗೆ ತಲುಪುತ್ತಾರೆ. ಸದ್ಯ ಇಂತಹುದೇ ಸ್ಥಿತಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಇದ್ದಾರೆ. ಹೌದು.. ಇತ್ತೀಚಿಗೆ ರಿಲೀಸ್ ಆದ ಅವರ ಮನ್ಮಥುಡು 2 ಚಿತ್ರದ ಸೀನೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆಶ್ಚರ್ಯವೇನೆಂದರೆ ಆ ಸೀನಿಗೆ ಭಾರತೀಯ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಆದರೆ ಅಮೆರಿಕಾದಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಿದ್ದು, ಆ ಸೀನು ಅಲ್ಲಿ ಪ್ರದರ್ಶನಗೊಂಡು ಅದರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮನ್ಮುಥುಡು ಚಿತ್ರದ ದೃಶ್ಯವೊಂದರಲ್ಲಿ ರಾಕುಲ್ ಆ್ಯಂಕರ್ ಝಾನ್ಸಿಯನ್ನು ಎಳೆದು ತುಟಿಗೆ ಚುಂಬಿಸುತ್ತಾರೆ. ಇದೇ ಫೊಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ಅನೇಕರು ರಾಕುಲ್ ಕಾಲೆಳೆದಿದ್ದು, ‘ರಾಕುಲ್ ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿದ್ದೆ. ಆದರೆ ನೀವು ಲೆಸ್ಬಿಯನ್ ಎಂಬುದು ನನಗೆ ಗೊತ್ತಿರಲಿಲ್ಲ,’ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಚಿತ್ರದ ನಿರ್ದೇಶಕನ ವಿರುದ್ಧ ಹರಿಹಾಯ್ದಿದ್ದಾರೆ.