ಸೋಶಿಯಲ್ ಖಾತೆಗಳ ಬೆಲೆ ಸಾಕಷ್ಟು ಸೆಲೆಬ್ರೆಟಿಗಳಿಗೆ ಈಗೀಗ ಗೊತ್ತಾಗುತ್ತಿದೆ. ತಮ್ಮ ನೆರೆಹೊರೆಯ ಸೆಲೆಬ್ರೆಟಿಗಳು ಸೋಶಿಯಲ್ ಖಾತೆಗಳಲ್ಲಿ ಸಕ್ರಿಯರಾಗಿರುವ ಉದ್ದೇಶವನ್ನು ಮನಗಂಡ ಅನೇಕ ಸೆಲೆಬ್ರೆಟಿಗಳು ಒಬ್ಬೊಬ್ಬರಾಗಿಯೇ ಸೋಶಿಯಲ್ ಖಾತೆಗಳನ್ನು ತೆರೆಯಲು ಮುಂದಾಗುತ್ತಿದ್ದಾರೆ. ಈ ಹಿಂದೆ ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇನ್ ಸ್ಟಾ ಗ್ರಾಂ ಪ್ರವೇಶಿಸಿದ್ದಾರೆ. ಸದ್ಯ ಟಾಲಿವುಡ್ ನಟ ರಾಮ್ ಚರಣ್ ತೇಜ್ ಸಹ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ.

ಯೆಸ್.. alwaysramcharan ರಾಮ್ ಚರಣ್ ಅವರ ಯುಸರ್ ನೇಮ್ ಆಗಿದ್ದು,  ನಾಲ್ಕೇ ದಿನಕ್ಕೆ ನಾಲ್ಕು ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಸದ್ಯಕ್ಕೆ, ತಮ್ಮ ಖಾತೆಯಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ. ತಮ್ಮ ಮೊದಲ ಫೋಟೋಗೆ 1 ಲಕ್ಷದ 65 ಸಾವಿರಕ್ಕೂ ಹೆಚ್ಚು ಮೆಚ್ಚುಗೆ ಸಿಕ್ಕಿದೆ. ಇನ್ಸ್ಟಾಗ್ರಾಮ್ ಖಾತೆ ತೆರೆದ ಬಗ್ಗೆ ವಿಡಿಯೋ ಮೂಲಕ ತಿಳಿಸಿರುವ ರಾಮ್ ಚರಣ್ ಇನ್ನು ”ಮುಂದೆ ಹೊಸ ವೇದಿಕೆಯ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತೇನೆ. ಸಾಕಷ್ಟು ಮನರಂಜನೆಯನ್ನು ನಿರೀಕ್ಷೆ ಮಾಡುತ್ತೇನೆ.” ಎಂದು ತಿಳಿಸಿದ್ದಾರೆ.

CG ARUN

ನಾಳೆ ಪರಭಾಷೆಗಳಲ್ಲೂ ಕುರುಕ್ಷೇತ್ರ ಟ್ರೇಲರ್ ಬಿಡುಗಡೆ!

Previous article

ಕಂಗನಾ ಪತ್ರಕರ್ತರನ್ನು ಕ್ಷಮೆ ಕೇಳಲಿದ್ದರೆ ಕಂಗನಾ ಸಿನಿಮಾಗಳಿಗೆ ಪ್ರಚಾರವಿಲ್ಲ:  ಸಿನಿಮಾ ಪತ್ರಕರ್ತ ಸಮೂಹ!

Next article

You may also like

Comments

Leave a reply

Your email address will not be published. Required fields are marked *