ಚಿತ್ರನಿರ್ದೇಶಕ ರಾಮ್ಗೋಪಾಲ್ ವರ್ಮಾಗೂ, ವಿವಾದಗಳಿಗೂ ಬಲು ನಂಟು. ಅವರೀಗ ತಮ್ಮ ಹೊಸ ಸಿನಿಮಾ ’ಲಕ್ಷ್ಮೀಎನ್ಟಿಆರ್’ ವಿವಾದದ ಸುಳಿಯಲ್ಲಿದ್ದಾರೆ. ಜನಪ್ರಿಯ ತೆಲುಗು ನಟ, ರಾಜಕೀಯ ನಾಯಕ ಎನ್ಟಿಆರ್ ಕುರಿತಂತೆ ಅವರು ನಿರ್ದೇಶಿಸಲಿರುವ ಚಿತ್ರದ ವಿವಾದವಿದು. ಆರಂಭದಿಂದಲೂ ಈ ಚಿತ್ರದ ಬಗ್ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಸೊಪ್ಪು ಹಾಕದ ವರ್ಮಾ ಚಿತ್ರ ವಿರೋಧಿಸುವವರಿಗೆ ಟ್ವಿಟರ್ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಫೋಟೋಶಾಪ್ ಮಾಡಿದ ಮಚ್ಚು ಹಿಡಿದ ತಮ್ಮ ಫೋಟೋ ಟ್ವೀಟ್ ಮಾಡಿದ್ದು, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರ ಕಾಮೆಂಟ್ಗಳು ಸಿಗುತ್ತಿವೆ.
ಟ್ವೀಟ್ನಲ್ಲಿ ವರ್ಮಾ, ಇದು ಎನ್ಟಿಆರ್ ಕಥಾನಾಯಕುಡು ಅಲ್ಲ. ಎನ್ಟಿಆರ್ ಮಹಾನಾಯಕುಡು ಅಲ್ಲ.. ಎನ್ಟಿಆರ್ ಕುರಿತಂತೆ ಜನಸಾಮಾನ್ಯರಿಗೆ ತಿಳಿಯದ ಅನೇಕ ಸಂಗತಿಗಳನ್ನು ಲಕ್ಷ್ಮೀಎನ್ಟಿಆರ್ ಚಿತ್ರದಲ್ಲಿ ತೋರಿಸುತ್ತಿದ್ದೇನೆ. ಈ ಸಿನಿಮಾಗೆ ಯಾರಾದರೂ ಅಡ್ಡಿಯಾದರೆ ಎಂದು ಹಲ್ಲು ಕಚ್ಚಿ ಮಚ್ಚು ಹಿಡಿದಿರುವ ತಮ್ಮ ಫೋಟೋ ಟ್ವೀಟ್ ಮಾಡಿದ್ದಾರೆ. ವರ್ಮಾರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಕನ್ನಡ ನಟಿ ಯಜ್ಞಾ ಶೆಟ್ಟಿ ಅವರು ಎನ್ಟಿಆರ್ ಪತ್ನಿ ಲಕ್ಷ್ಮೀಪಾರ್ವತಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇತ್ತೀಚೆಗಷ್ಟೇ ಎನ್ಟಿಆರ್ ಕುರಿತಂತೆ ’ಕಥಾನಾಯಕುಡು’ ತೆಲುಗು ಸಿನಿಮಾ ತೆರೆಕಂಡಿತ್ತು. ಕ್ರಿಷ್ ನಿರ್ದೇಶನದ ಈ ಚಿತ್ರದಲ್ಲಿ ಎನ್ಟಿಆರ್ ಪಾತ್ರವನ್ನು ಅವರ ಪಾತ್ರ ಬಾಲಕೃಷ್ಣ ನಿರ್ವಹಿಸಿದ್ದರು. ಸದ್ಯದಲ್ಲೇ ಎನ್ಟಿಆರ್ ಕುರಿತಂತೆ ’ಮಹಾನಾಯಕುಡು’ ಸಿನಿಮಾ ತೆರೆಕಾಣಲಿದೆ. ಇದು ಚಿತ್ರದ ಎರಡನೇ ಭಾಗ. ಮೊದಲ ಚಿತ್ರದಲ್ಲಿ ಎನ್ಟಿಆರ್ ಅವರ ಸಿನಿಮಾ ಬದುಕು ಚರ್ಚಿಸಿದ್ದರೆ, ತೆರೆಕಾಣಲಿರುವ ಎರಡನೇ ಚಿತ್ರದಲ್ಲಿ ಎನ್ಟಿಆರ್ ರಾಜಕೀಯ ಜೀವನದ ಚಿತ್ರಣವಿದೆ.
#
No Comment! Be the first one.