ಇಸ್ಮಾರ್ಟ್ ಶಂಕರ್ ಚಿತ್ರದ ಯಶಸ್ಸಿನಲ್ಲಿರುವ ಟಾಲಿವುಡ್ ನಟ ರಾಮ್ ಪೋಥಿನೇನಿ ತನ್ನ ಮ್ಯೂಸಿ ಲುಕ್ ನ ನಂತರ ತಮ್ಮ ಹೇರ್ ಸ್ಟೈಲ್ ಮತ್ತು ಫೇಸ್ ಸ್ಟೈಲ್ ಎರಡನ್ನೂ ಬದಲಾಯಿಸಿಕೊಂಡಿದ್ದಾರೆ. ದಟ್ಟವಾದ ಗಡ್ಡ ಮೀಸೆ ಬಿಟ್ಟಿರುವ ರಾಮ್, ತಲೆಯಲ್ಲಿ ಮಾತ್ರ ಚಿಕ್ಕ ಚಿಕ್ಕ ಕೂದಲು ಬಿಟ್ಟಿದ್ದಾರೆ ಅವರು ಈ ಅವತಾರದಲ್ಲಿ ರಗಡ್ ಆಗಿ ಕಾಣಿಸುತ್ತಾರೆ.
https://www.instagram.com/p/B0-Mtu2IhlZ/?utm_source=ig_web_copy_link
ಮೈಲ್ಡ್ ಲೀ ವೈಲ್ಡ್ ವೈಲ್ಡ್ ಲೀ ಮೈಲ್ಡ್ ಎಂಬ ಟ್ಯಾಗ್ಲೈನ್ನೊಂದಿಗೆ ರಾಮ್ ಪೋಸ್ಟ್ ಮಾಡಿರುವ ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆಯನ್ನೇ ಪಡೆಯುತ್ತಿದೆ. ರಾಮ್ ಅವರ ಈ ಹೊಸ ಅವತಾರ ಅವರ ಅಭಿಮಾನಿಗಳಿಗೂ ಕೂಡ ಸಿಕ್ಕಾಪಟ್ಟೆ ಲೈಕ್ ಆಗಿದೆ. ಸದ್ಯ ಇಸ್ಮಾನ್ ಶಂಕರ್ ಚಿತ್ರದ ನಂತರ ಬ್ರೇಕ್ ತೆಗೆದುಕೊಂಡಿರುವ ರಾಮ್ ತಮ್ಮ ಮುಂದಿನ ಚಿತ್ರಕ್ಕಾಗಿ ಈ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರಾ ಎಂಬುದು ಸದ್ಯದ ಪ್ರಶ್ನೆ.