ಜಿ.ಎಸ್. ಶಿವರುದ್ರಯ್ಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ, ಮಕ್ಕಳ ಕಥಾನಕ ಹೊಂದಿರುವ ಚಿತ್ರ `ರಾಮನ ಸವಾರಿ’. ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾದ್ಯಮದವರು ಮತ್ತು ಗಣ್ಯರುಗಳಿಗೆ ಈ ಚಿತ್ರದ ವಿಶೇಷ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಮಕ್ಕಳ ಮನಸ್ಸು ಸದಾ  ಪಾರದರ್ಶಕವಾಗಿದ್ದು, ಅವರು ಸದಾ ತಮ್ಮ ತಂದೆ-ತಾಯಿಯೊಂದಿಗೆ ಇರಲು ಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದ ತಂದೆ ತಾಯಿ ಇಬ್ಬರೂ ಬೇರೆಯಾದಾಗ ರಾಮ ತನ್ನ ಅಜ್ಜಿಯ ಮನೆಯಲ್ಲಿ ಬೆಳಯುತ್ತಿರುತ್ತಾನೆ.

ಒಂದು ಹಂತದಲ್ಲಿ ರಾಮನ ತಂದೆ ತನ್ನ ಮಗನನ್ನು ಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂ ಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ.  ನಿಮಗೆ ಬೇಕಾದಂತೆ ಆಟವಾಡಿ ಮಕ್ಕಳ ಮನಸ್ಸನ್ನು ಕದಡಬೇಡಿ. ಅವರು ನಿರ್ಜೀವ ಬೊಂಬೆಯಲ್ಲ ಎಂದು ಬುದ್ದಿವಾದ ಹೇಳಿ ಇಬ್ಬರನ್ನು ಒಂದುಗೂಡಿಸುತ್ತಾರೆ. ರಾಮನು ಪೋಷಕರೊಂದಿಗೆ  ಅಜ್ಜನ ಹಳ್ಳಿ ತೊರೆದು ತನ್ನ ಮನೆಗೆ ಹೋಗಿ ಗೆಳೆಯ ನೀಡಿದ ದುರ್ಬೀನಿನಲ್ಲಿ ನೊಡುತ್ತಾ ಸಂತೋಷ ಪಡುತ್ತಾನೆ. ಇದು ರಾಮನ ಸವಾರಿ ಚಿತ್ರದ ಕಥಾ ಹಂದರ.  ಕೆ.ಸದಾಶಿವ ಅವರು ಬರೆದಿರುವ ಕಾದಂಬರಿಯನ್ನು  ತೆಗೆದುಕೊಂಡು ಅದಕ್ಕೆ  ನಿರ್ದೇಶಕ ಕೆ.ಶಿವರುದ್ರಯ್ಯ. ಚಿತ್ರರೂಪ ನೀಡಿದ್ದಾರೆ. ಇನ್ನು ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆಯನ್ನು ಹಿರಿಯ ನಿರ್ದೇಶಕ  ಗಿರೀಶ್ ಕಾಸರವಳ್ಳಿ ಅವರು ರಚಿಸಿದ್ದಾರೆ. ಅಲ್ಲದೆ  ಕೆ.ಕಲ್ಯಾಣ ಅವರ ಸಂಗೀತ ಸಂಯೋಜನೆ ಕೂಡ ಈ ಚಿತ್ರಕ್ಕಿದೆ. ಜೊತೆಗೆ ಎಂ.ಎನ್. ಸ್ವಾಮಿ  ಅವರ ಸಂಕಲನವೂ ಈ ಚಿತ್ರಕ್ಕಿದೆ.

ರಾಮನ ಸವಾರಿ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಆರೋನ್ ನಟಿಸಿದ್ದು,  ರಾಜೇಶ್ ನಟರಂಗ ಹಾಗೂ  ಸೋನುಗೌಡ ರಾಮನ ತಂದೆ, ತಾಯಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಪೋಷಕ ಕಲಾವಿದರಾಗಿ ಭಾರ್ಗವಿ ನಾರಾಯಣ್, ಶೃಂಗೇರಿ ರಾಮಣ್ಣ, ವಿಜಯ್‌ಕುಮಾರ್, ಮಾಸ್ಟರ್ ಆಯುಷ್ ಮುಂತಾದವರು ನಟಿಸಿzರೆ.  ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನವಾಗಿ  ಸ್ಟ್ರೋಯಿ ಜೋಸೆಫ್  ಅವರು  ಸುಧಾ ಕ್ರಿಯೇಶನ್ಸ್ ಮೂಲಕ ರಾಮನ ಸವಾರಿ ಚಿತ್ರವನ್ನು ನಿರ್ಮಾಣ ಮಾಡಿzರೆ. ಕಳೆದ ವರ್ಷ ನಡೆದ  ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಈ ಚಿತ್ರ ಪ್ರದರ್ಶನಗೊಂಡಿತ್ತು. ಸಧ್ಯದಲ್ಲೇ ರಾಮನ ಸವಾರಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

CG ARUN

ತಾಯಿ ಮಗಳ ಸುತ್ತ ಸುತ್ತುವ ಥ್ರಿಲ್ಲರ್ ‘ಮಹಿರ’

Previous article

ರಂಗಾಯಣ ರಘು ಈಗ ಸಿಂಗರ್!

Next article

You may also like

Comments

Leave a reply

Your email address will not be published. Required fields are marked *