ವಿಂಕ್‌ವಿಷಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಎರಡನೆಯ ಚಿತ್ರ ರಾಮಾರ್ಜುನ ಚಿತ್ರಕ್ಕೆ ಈಗಾಗಲೇ ಶೇಕಡ ೮೦% ಭಾಗ ಚಿತ್ರೀಕರಣ ಪೂರೈಸಿದೆ.


ಪೊಲೀಸ್ ಕ್ವಾಟ್ರಸ್ ಚಿತ್ರದಿಂದ ಆರಂಭಿಸಿ, ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದವರು ಅನೀಶ್. ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಪಕ್ಕಾ ಆಕ್ಷನ್ ಸ್ಟಾರ್ ಆಗಿ ಹೊರಹೊಮ್ಮಿದ ಅನೀಶ್ ಈಗ ಅನೀಶ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿ ನಾಯಕನಟನಾಗಿ ನಟಿಸಿರುವ ‘ರಾಮಾರ್ಜುನ’ ಚಿತ್ರದ ಮೂಲಕಲ ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಯ ನಂತರ ಡಬ್ಬಿಂಗ್ ಹಕ್ಕಿಗೆ ಅತ್ಯುತ್ತಮ ಬೇಡಿಕೆ ಬಂದಿದೆ ಎನ್ನಲಾಗುತ್ತಿದೆ.

ಸದ್ಯದ ವಿಚಾರವೆಂದರೆ, ಈ ಚಿತ್ರಕ್ಕಾಗಿ ಅಪ್ಪು ಪುನೀತ್ ರಾಜ್‌ಕುಮಾರ್ ಗೀತೆಯೊಂದನ್ನು ಹಾಡಿದ್ದಾರೆ. ನವೀನ್ ರೆಡ್ಡಿ ಬರೆದಿರುವ ’ಮನಸೆ ಮೂರು ದಾರಿಯನ್ನು ತೋರು ನೀನು, ನಿನ್ನೊಳಗೆ ಮರೆಯಾದ ನನಗೆ… ಪ್ರೀತಿ ಅಂದ ಮೇಲೆ ಈ ಗೀತೆಯನ್ನು ಹಾಡಿದ್ದಾರೆ. ಇದಕ್ಕೂ ಮೊದಲು ಅಪ್ಪು ಅವರು ಅನಿಶ್ ಅವರ ಚಿತ್ರಕ್ಕೆ ’ಅಕಿರ’ ಹಾಗೂ ’ವಾಸು ನಾನು ಪಕ್ಕಾ ಕಮರ್ಷಿಯಲ್’ ಚಿತ್ರಗಳಿಗೂ ಹಾಡಿದ್ದರು. ಚಿತ್ರದ ನಿರ್ದೇಶನ – ಅನಿಶ್, ಛಾಯಾಗ್ರಹಣ – ನವೀನ್ ಕುಮಾರ್, ಸಂಗೀತ – ಆನಂದ್ ರಾಜವಿಕ್ರಮ್, ಸಾಹಸ – ವಿಕ್ರಂ ಮೋರ್, ಸಂಭಾಷಣೆ – ಶಂಕರ್ ರಾಮನ್, ಕಿರಣ್ ಚಂದ್, ತಾರಾಗಣದಲ್ಲಿ ಅನಿಶ್, ನಿಶ್ವಿಕಾ, ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್, ಅರುಣ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ, ಹನುಮಂತೇಗೌಡ, ಸೀನಿ ಮಿತ್, ಉಗ್ರಂ ಮಂಜು, ಮಂಜು ಪಾವಗಡ, ಶಿವಾನಂದ ಸಿಂಧಗಿ, ಭರತ್, ಲೋಕಿ ಮುಂತಾದವರಿದ್ದಾರೆ.

CG ARUN

ಕಬ್ಜ ಮಾಡಿಕೊಳ್ಳಲು ಹೊರಟಿತು ಉಪ್ಪಿ-ಚಂದ್ರು ಜೋಡಿ!

Previous article

ಉಪ್ಪಿ ಸಿನಿಮಾದ ಟೈಟಲ್ ಏನು ಗೊತ್ತಾ?

Next article

You may also like

Comments

Leave a reply

Your email address will not be published. Required fields are marked *