ಸದ್ಯ ಭಾರತದಾದ್ಯಂತ ಕನ್ನಡ ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ ಕುರುಕ್ಷೇತ್ರ. ಬಹುದೊಡ್ಡ ತಾರಾಬಳಗ, ದೊಡ್ಡ ಬಜೆಟ್, 3ಡಿ ಸಿನಿಮಾ ಇತ್ಯಾದಿ ವಿಶೇಷಗಳನ್ನೂ ಹೊಂದಿರುವ ಕುರುಕ್ಷೇತ್ರ ಈಗಾಗಲೇ ಸಾಕಷ್ಟು ಕೌತುಕತೆಯನ್ನು ಸೃಷ್ಟಿಸಿದೆ.
ಇದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ರಾಮಾಯಣದ ಕುರಿತು ಸಿನಿಮಾ ಬರಲಿದೆ ಎಂಬ ಸುದ್ದಿ ಈಗಾಗಲೇ ಎದ್ದಿದೆ. ನಿತೀಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಹೃತಿಕ್ ರೋಷನ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರಂತೆ. ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ಈ ಚಿತ್ರವನ್ನ ತಯಾರು ಮಾಡಲು ಪ್ಲಾನ್ ಮಾಡಲಾಗಿದ್ದು, ಸುಮಾರು 500 ಕೋಟಿ ಬಜೆಟ್ ಹಾಕಲು ನಿರ್ಮಾಪಕರು ಮುಂದಾಗಿದ್ದಾರಂತೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಮಧು ಮಂತೇನಾ, ನಮಿತ್ ಮಲ್ಹೋತ್ರಾ ಜಂಟಿಯಾಗಿ ರಾಮಾಯಣ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರಂತೆ. ಇನ್ನು ಸೀತೆಯ ಪಾತ್ರದಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕುರುಕ್ಷೇತ್ರದ ಬಿಸಿ ಈ ಮಟ್ಟಿಗೆ ಭಾರತದಾದ್ಯಂತ ತಟ್ಟಿದೆ ಎಂದರೆ ಕನ್ನಡಿಗರು ಹೆಮ್ಮೆ ಪಡಬೇಕಲ್ವೇ..!
No Comment! Be the first one.