ಕಳೆದ ಮೂರು ಸೀಜನ್ ನಿಂದ ಜನಪ್ರಿಯ ರಿಯಾಲಿಟಿ ಶೋ ಎಂದು ಹೆಸರು ಗಳಿಸಿದ್ದ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಅದ್ಯಾಕೋ ಸೀಜನ್ ನಾಲ್ಕರಲ್ಲಿ ತನ್ನ ವರ್ಚಸ್ಸು, ಗಮತ್ತುಗಳನ್ನೆಲ್ಲಾ ಗಾಳಿಗೆ ತೂರಿ ಸಪ್ಪೆ ಸಪ್ಪೆಯಾಗಿ ಪ್ರದರ್ಶನಗೊಂಡು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿ ಹೋಯ್ತು. ಯಾವಾಗ ಪ್ರೇಕ್ಷಕರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಹಠಾತ್ ಫೇಲ್ಯೂರ್ ಆಗಿಹೋಯಿತೋ ರೇಸಿನಿಂದ ಹೊರಬಿದ್ದಿದೆ.

View this post on Instagram

Hope you are enjoying the show:)

A post shared by Ramesh Aravind (@ramesh.aravind.official) on

ಆರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ಸೀಟಿಗೆ ಘನತೆಯನ್ನು ತಂದುಕೊಡುವಲ್ಲಿ ಯಶಸ್ವಿಯಾದ ಈ ಶೋ ನಂತರ ಸುಧಾಮೂರ್ತಿ, ನಾರಾಯಣ ಮೂರ್ತಿ, ವೈಜಯಂತ್ ಬಿರಾದರ್ ರಂತಹ ಮಾದರಿ ವ್ಯಕ್ತಿತ್ವಗಳನ್ನು ಕೂರಿಸಿ ಕೊನೆಯವರೆವಿಗೂ ಇಂತಹ ಗಣ್ಯರನ್ನೇ ಕೂರಿಸಬಹುದೆಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆನಂತರದಲ್ಲಿ ಕಳ್ಳ ಪಿಳ್ಳರನ್ನು ಕೂರಿಸಿ ಥೂ.. ಛೀ.. ಎನ್ನುವ ಮಟ್ಟಿಗೆ ಕಾರ್ಯಕ್ರಮ ಹಳ್ಳ ಹಿಡಿದದ್ದು ವಿಷಾದದ ಸಂಗತಿ. ಅದು ತಂಡದ ಗಮನಕ್ಕೆ ಬಂದು ಕಾರ್ಯಕ್ರಮವನ್ನು ಅಂತ್ಯಗೊಳಿಸುವ ನಾಟಕವಾಡುವ ಮೂಲಕ ಸೀಜನ್ ನಾಲ್ಕಕ್ಕೆ ವಿದಾಯವನ್ನು ಹೇಳುತ್ತಿದೆ. ಈ ಕುರಿತು ರಮೇಶ್ ಅರವಿಂದ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಹಳಷ್ಟು ಮಂದಿಗಿದು ಅರಗಿಸಿಕೊಳ್ಳಲಾಗದ ತುತ್ತಾದರೂ ಅನರ್ಹರನ್ನು ಕೆಂಪು ಸೀಟಿನಲ್ಲಿ ಕುಳ್ಳರಿಸಿ ಕಳಂಕ ಹೊರುವ ಬದಲು ಸೈಲೆಂಟಾಗಿ ಕಾರ್ಯಕ್ರಮವನ್ನು ಮುಗಿಸಿದ್ದೂ ಆರೋಗ್ಯಕರ ಬೆಳವಣಿಗೆ.

 

CG ARUN

ಯುವರತ್ನಕ್ಕೆ ಸಾಹೋ ಫೈಟಿಂಗ್ ಮಾಸ್ಟರ್!

Previous article

ಸದ್ದು ಮಾಡುತ್ತಿದೆ ಕಾಣದಂತೆ ಮಾಯವಾದನು ಟ್ರೇಲರ್!

Next article

You may also like

Comments

Leave a reply

Your email address will not be published. Required fields are marked *