‘ದೈಜಿ’ ಮುಂಬರುವ ಥ್ರಿಲ್ಲರ್-ಹಾರರ್ ಚಿತ್ರವಾಗಿದ್ದು, ಡಾ. ರಮೇಶ್ ಅರವಿಂದ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಮತ್ತು ಇದನ್ನು ಆಕಾಶ್ ಶ್ರೀವತ್ಸರವರು ನಿರ್ದೇಶಿಸಲಿದ್ದಾರೆ. ವಿಭಾ ಕಶ್ಯಪ್ ನಿರ್ಮಾಕೊಚ್ಚಲು ಬಂದರಾ ದೈಜಿ ರಮೇಶ್?!ಣದ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಚಿತ್ರವು ಡಾ.ರಮೇಶ್ ಅರವಿಂದ್ ಅವರ 106 ನೇ ಚಿತ್ರವಾಗಿದ್ದು, ಈ ಹಿಂದೆ ಶಿವಾಜಿ ಸುರತ್ಕಲ್ 1 ಮತ್ತು 2 ಸಿನಿಮಾಗಳನ್ನು ನಿರ್ದೇಶಸಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸರವರು ಮೂರನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ.
ದೈಜಿಯು ಹಾರರ್-ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಡಾ.ರಮೇಶ್ ಅರವಿಂದ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರತಂಡ ಶೀಘ್ರದಲ್ಲೇ ವಿದೇಶದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಡಾ.ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
No Comment! Be the first one.