ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ತನ್ನ ಸ್ನೇಹಿತೆ ಗ್ಯಾಬ್ರಿಯಾಲ್ಲಾ ಡಿಮೆಟ್ರೈಡ್ಸ್ ಗರ್ಭಿಣಿಯಾಗಿರುವುದನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೊವೊಂದನ್ನ ಶೇರ್ ಮಾಡಿ ಖಚಿತಪಡಿಸಿದ್ದಾರೆ. ಈ ಫೋಟೊ ನೋಡಿದ ನೆಟ್ಟಿಗರು, ಅಭಿಮಾನಿಗಳು ಹಾಗೂ ಹಿತೈಶಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಈ ಚಿತ್ರದಲ್ಲಿ ಡಿಮಟ್ರೈಡ್ ಗರ್ಭಿಣಿಯಾಗಿರುವುದು ಕಂಡುಬರುತ್ತದೆ. ಜೊತೆಗೆ ಡಿಮೈಟ್ರೈಡ್ಸ್ ಎಂಬ ಮಗುವಿಗೆ ಪುಟ್ಟ ಮಗುವೊಂದು ಬರುತ್ತಿರುವುದಾಗಿ ಫೋಟೊದ ಜೊತೆ ರಾಮ್ ಪಾಲ್ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಇದಾದ ಸ್ವಲ್ಪ ಹೊತ್ತಿಗೆ ಡಿಮೆಟ್ರೈಡ್ಸ್ ಸಹ ತನ್ನ ಅಕೌಂಟಿನಲ್ಲಿರುವ ಸಾಮಾಜಿಕ ಜಾಲತಾಣದಲ್ಲಿ ರಾಮ್ ಪಾಲ್ ಶೇರ್ ಮಾಡಿರುವ ಫೋಟೊವನ್ನೇ ಶೇರ್ ಮಾಡಿ ಗರ್ಭಿಣಿಯಾಗಿರುವುದನ್ನ ಖಚಿತಪಡಿಸಿದ್ದಾರೆ. ನಿಮಗಾಗಿ ಇನ್ನೊಂದು ಜೀವ ಕಾಯ್ತಾ ಇದೆ ಎಂದು ಬರೆದಿದ್ದಾರೆ. ಇತ್ತೀಚೆಗೆ ರಾಮ್ ಪಾಲ್ ಭಾರತೀಯ ಶೈಲಿಯ ವಿನ್ಯಾಸವುಳ್ಳ ಬಟ್ಟೆಯನ್ನ ತೊಟ್ಟು ತನ್ನ ಸ್ನೇಹಿತನ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಡಿಮೈಟ್ರೈಡ್ ಸಹ ಭಾಗವಹಿಸಿದ್ದರು. ಇವರಿಬ್ಬರ ಮದುವೆ ಆಗಿರುವ ಸುದ್ದಿ ಹರಡಿತ್ತು. ಮದುವೆ ಮುಗಿದತಕ್ಷಣವೇ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಸ್ಪಷ್ಟಪಡಿಸಿದ ಅರ್ಜುನ್ ರಾಮ್ ಪಾಲ್ ಅದು ನನ್ನ ಮದುವೆ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
No Comment! Be the first one.