ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆಯದ್ದು, ಕಾಂಗ್ರೆಸ್ ನಲ್ಲಿ ರಮ್ಯ ಮದುವೆಯಾದರೆ ಜೀವನ ಪಾವನ ಎಂಬ ಕಿಂಡಲ್ಲುಗಳು ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯವೂ ಒಂದಿಲ್ಲೊಂದು ವಿಚಾರಕ್ಕೆ ಹರಿದಾಡುತ್ತಲೇ ಇರುತ್ತದೆ. ಮೂವತ್ತು ದಾಟಿದ್ದರೂ ಸಹ ಅವರಿಬ್ಬರೂ ಮದುವೆಯಾಗದೇ ಅದಾವ ಶ್ರೀರಾಮಚಂದ್ರನಿಗೆ ವೇಯ್ಟ್ ಮಾಡುತ್ತಿದ್ದಾರೋ ಹನುಮಂತನೇ ಬಲ್ಲ.
ಅಂದಾಜು 10 ವರ್ಷಗಳ ಕಾಲ ಚಂದನವನದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ ಡಿಮ್ಯಾಂಡ್ ಇರುವಾಗಲೇ ಚಿತ್ರರಂಗದಿಂದ ದೂರ ಉಳಿದು ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಪ್ರವೇಶಿಸಿ ಕೆಲ ದಿನಗಳ ಕಾಲ ರಾಜಕಾರಣಿಯಾಗಿಯೂ, ಜನರ ಸಂಕಷ್ಟಗಳನ್ನು ಅಲ್ಲಿಂದಿಲ್ಲೊಂದು ಆಲಿಸಿದ್ದರೆಂಬ ಮಾತು ಇತ್ತು. ಅದರಲ್ಲಿ ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ.
ಸದ್ಯ ಸಿನಿಮಾದಲ್ಲಿಯೂ ನಟಿಸದೇ ದೂರ ಉಳಿದಿರುವ; ರಾಜಕಾರಣದಲ್ಲಿಯೂ ಸಕ್ರಿಯರಾಗದಿರುವ ರಮ್ಯ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಪಟ್ಟ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಹೀಗಿದ್ದ ರಮ್ಯ ಕುರಿತಾಗಿ ಸಿಹಿ ಸುದ್ದಿಯೊಂದನ್ನು ಬಂದಿದೆ. ಯೆಸ್.. ರಮ್ಯ ಮದುವೆಯಾಗಲು ಮನಸ್ಸು ಮಾಡಿದ್ದು, ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆಂಬ ಸುದ್ದಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜತೆಗೆ ರಮ್ಯ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವಾದರೆ ಆರೇಳು ವರ್ಷಗಳಿಂದಲೂ ರಿಲೇಷನ್ ಶಿಪ್ ನಲ್ಲಿದ್ದ ಪೋರ್ಚುಗಲ್ ದೇಶದ ರಾಫೆಲ್ ಮತ್ತು ರಮ್ಯ ಸದ್ಯದಲ್ಲೇ ಮದುವೆಯಾಗುವುದಂತು ಗ್ಯಾರೆಂಟಿ. ಆಗ ಕುಮಾರಿ ಶೋಭಕ್ಕನಿಗೆ ಸ್ಪರ್ಧೆಯೊಡ್ಡಲು ಮತ್ತಾರು ಬರುತ್ತಾರೋ ನೋಡಬೇಕು.