ಕಾಂಗ್ರೆಸ್ ಹೈಕಮಾಂಡ್ನಲ್ಲಿ ತನ್ನದೇ ಆದ ಪ್ರಭಾವ ಗಳಿಸಿಕೊಂಡಿದ್ದ ರಮ್ಯಾ ಅವರನ್ನು ಸೋನಿಯಾ ಹಾಗೂ ಪ್ರಿಯಾಂಕಾ ಹಲವು ಕಾರಣಗಳಿಗಾಗಿ ಮೂಲೆಗೆ ತಳ್ಳಿದರು. ರಾಹುಲ್ ಗಾಂಧಿ ಜೊತೆ ಇದ್ದ ಅನ್ಯೋನ್ಯತೆಯ ಸಂಬಂಧವನ್ನೇ ಬಳಸಿಕೊಂಡು ನಾನೇ ಎಐಸಿಸಿ ಮಿನಿ ಬಾಸು ಎಂಬಂತೆ ಆಡುತ್ತಿದ್ದ ರಮ್ಯಾ ಪಾಲಿಗೆ ಆಗಲೇ ಸಾಡೇಸಾತ್ ಶನಿ ವಕ್ಕರಿಸಿಕೊಂಡಿತು. ರಾಹುಲ್ ಟೀಮ್ನಿಂದ ರಾತ್ರೋರಾತ್ರಿ ಹೊರತಳ್ಳಿಸಿಕೊಂಡ ರಮ್ಯಾ ವರ್ಷಕ್ಕೂ ಹೆಚ್ಚು ಕಾಲ ನಾಪತ್ತೆಯೇ ಆಗಿಬಿಟ್ಟಿದ್ದರು. ಆದರೆ ಎಷ್ಟು ದಿನ ಅಜ್ಞಾತವಾಸದಲ್ಲಿರಲು ಸಾಧ್ಯ? ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿಯೇ ಬಿಟ್ಟಿದ್ದಾರೆ. ಹಳೆಯದನ್ನೆಲ್ಲ ಮರೆತು ಹೊಸ ಭವಿಷ್ಯದ ಭರವಸೆಯಲ್ಲಿ ಸಿನಿಮಾ ಹಾಗೂ ರಾಜಕೀಯ ರಂಗದತ್ತ ಕಣ್ಣು ನೆಟ್ಟಿದ್ದಾರೆ. ರಾಜಧಾನಿಯ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಕೂಗಳತೆಯ ದೂರದ ಪಂಚತಾರಾ ಹೋಟೆಲ್ನಲ್ಲಿ ಮತ್ತೆ ವಾಸ್ತವ್ಯ ಹೂಡಿದ್ದಾರೆ. ಮತ್ತೆ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಅವಕಾಶ ಅರಸುತ್ತಿದ್ದಾರೆ. ಆದರೆ ಈಕೆಯನ್ನು ಕ್ಯಾರೇ ಎನ್ನುವವರು ಇಲ್ಲದಂತಾಗಿದೆ. ಹಿಂದೆ ಮಾಡಿಕೊಂಡ ಸ್ವಯಂಕೃತ ಅಪರಾಧಗಳು ರಮ್ಯಾಗೆ ಈಗ ಕಾಡಲಾರಂಭಿಸಿವೆ.
ದೆಹಲಿ ದರ್ಬಾರ್ ಮುಗಿಸಿ ಗಂಟು ಮೂಟೆ ಕಟ್ಟಿಕೊಂಡು ಮತ್ತೆ ಬೆಂಗಳೂರಿಗೆ ಬಂದ ಮಾಜಿ ನಟಿ? ಮಾಜಿ ಸಂಸದೆ, ಎಐಸಿಸಿ ಮಾಜಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರನ್ನು ಇಲ್ಲಿ ಕ್ಯಾರೇ ಎನ್ನುವವರೇ ಇಲ್ಲ. ಅತ್ತ ಸಿನಿಮಾದವರೂ ಕರೆಯುತ್ತಿಲ್ಲ, ಇತ್ತ ಕಾಂಗ್ರೆಸ್ ರಾಜಕಾರಣಿಗಳು ಕ್ಯಾರೇ ಅನ್ನುತ್ತಿಲ್ಲ…
ಫಿಲ್ಮು, ಪಾಲಿಟಿಕ್ಸು ಎರಡು ರಂಗದಲ್ಲೂ ಮಿಂಚಿ ಹಸ್ತ ಪಕ್ಷದ ದೊಡ್ಡ ದೊರೆಗಳ ಖಾಸಗಿ ದರ್ಬಾರ್ನಲ್ಲಿ ಮಿನುಗಿ ಯೌವ್ವನ ಬರಿದು ಮಾಡಿಕೊಂಡು ಕರ್ನಾಟಕ ರಾಜಧಾನಿಗೆ ಮರಳಿ ಪ್ರತಿಷ್ಠಿತ ಹೋಟೆಲ್ನಲ್ಲಿ ಜಾಂಡಾ ಊರಿರುವ ರಮ್ಯಾ ಅವರ ಸದ್ಯದ ವಾಸ್ತವ ಪರಿಸ್ಥಿತಿ ಇದು.
ಇತ್ತೀಚೆಗೆ ರಮ್ಯಾ, ಮಾರ್ಚ್ಗೆ ಗುಡ್ ನ್ಯೂಸ್ ಕೊಡುವೆ ಎಂದಿದ್ದರು. ಈ ಹೇಳಿಕೆಯ ಸತ್ಯ ಜಾಲಾಡಿ ನೋಡಿದರೆ ಆಕೆಯ ಭವಿಷ್ಯ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಕಮರಿ ಹೋಗುತ್ತಿರುವುದು ಕಂಡುಬರುತ್ತಿದೆ. ರಮ್ಯಾ ಚಿತ್ತ ಯಾವುದರತ್ತ ಎಂಬುದಾಗಿ ಒಂದೆಡೆ ಅಭಿಮಾನಿಗಳು ಕುತೂಹಲದಿಂದ ಕಾದರೆ ಕೈ ಕಾರ್ಯಕರ್ತರಿಗಂತೂ ಊರಿಗೊಬ್ಬಳೇ ಪದ್ಮಾವತಿನಾ ಅಂತ ಕೇಳೋಕೆ ಅಣಿಯಾಗುತ್ತಿದ್ದಾರೆ. ಆದರೆ ರಮ್ಯಾ ಮೇಲ್ನೋಟಕ್ಕೆ ಮಾತ್ರ ಸ್ಕಿçಪ್ಟ್ ಓದುತ್ತಿದ್ದೀನಿ ಎಂದು ಕಾಗೆ ಹಾರಿಸಿಕೊಂಡು ಒಳಗೊಳಗೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಸ್ಥಾನ ಗಿಟ್ಟಿಸಲು ಓಡಾಡುತ್ತಿರುವುದು ಈಗಿನ ಹೊಸ ಸುದ್ದಿ.
ರಾಜ್ಯ ಕಾಂಗ್ರೆಸ್ ನಾಯಕರ ಓಲೈಸುವ ಸ್ಥಿತಿ
ಕಾಂಗ್ರೆಸ್ ಹೈಕಮಾಂಡ್ನಲ್ಲಿ ತನ್ನದೇ ಆದ ಪ್ರಭಾವ ಗಳಿಸಿಕೊಂಡಿದ್ದ ರಮ್ಯಾ ಅವರನ್ನು ಸೋನಿಯಾ ಹಾಗೂ ಪ್ರಿಯಾಂಕಾ ಹಲವು ಕಾರಣಗಳಿಗಾಗಿ ಮೂಲೆಗೆ ತಳ್ಳಿದರು. ರಾಹುಲ್ ಗಾಂಧಿ ಜೊತೆ ಇದ್ದ ಅನ್ಯೋನ್ಯತೆಯ ಸಂಬAಧವನ್ನೇ ಬಳಸಿಕೊಂಡು ನಾನೇ ಎಐಸಿಸಿ ಮಿನಿ ಬಾಸು ಎಂಬಂತೆ ಆಡುತ್ತಿದ್ದ ರಮ್ಯಾ ಪಾಲಿಗೆ ಆಗಲೇ ಸಾಡೇಸಾತ್ ವಕ್ಕರಿಸಿಕೊಂಡಿತು. ರಾಹುಲ್ ಟೀಮ್ನಿಂದ ರಾತ್ರೋರಾತ್ರಿ ಹೊರತಳ್ಳಿಸಿಕೊಂಡ ರಮ್ಯಾ ವರ್ಷಕ್ಕೂ ಹೆಚ್ಚು ಕಾಲ ನಾಪತ್ತೆಯೇ ಆಗಿಬಿಟ್ಟಿದ್ದರು. ಆದರೆ ಎಷ್ಟು ದಿನ ಅಜ್ಞಾತವಾಸದಲ್ಲಿರಲು ಸಾಧ್ಯ? ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿಯೇ ಬಿಟ್ಟಿದ್ದಾರೆ. ಹಳೆಯದನ್ನೆಲ್ಲ ಮರೆತು ಹೊಸ ಭವಿಷ್ಯದ ಭರವಸೆಯಲ್ಲಿ ಸಿನಿಮಾ ಹಾಗೂ ರಾಜಕೀಯ ರಂಗದತ್ತ ಕಣ್ಣು ನೆಟ್ಟಿದ್ದಾರೆ. ರಾಜಧಾನಿಯ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಕೂಗಳತೆಯ ದೂರದ ಪಂಚತಾರಾ ಹೋಟೆಲ್ನಲ್ಲಿ ಮತ್ತೆ ವಾಸ್ತವ್ಯ ಹೂಡಿದ್ದಾರೆ.
ಬೆಂಗಳೂರಿಗೆ ಬಂದೊಡನೆ ಪುನೀತ್ ರಾಜ್ಕುಮಾರ್ ಹಾಡಿ ಹೊಗಳಿದ್ದ ರಮ್ಯಾ ಅವರ ಮೂಲಕ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಲು ಪ್ರಯತ್ನಿಸಿದ್ದರು. ಎರಡು ಚಿತ್ರಕಥೆ ಕೇಳಿ `ನಾಟ್ ಓಕೆ ಅಪ್ಪು’ ಎಂದು ಹೇಳಿ ಸುಮ್ಮನಾದೆ ಎಂದು ಕೊಚ್ಚಿಕೊಂಡಿದ್ದರು. ಅತ್ತ ಪುನೀತ್ ಅಕಾಲಿಕವಾಗಿ ಇಹಲೋಕ ತ್ಯಜಿಸುತ್ತಿದ್ದಂತೆ ಚಿತ್ರರಂಗದಲ್ಲಿ ರಮ್ಯಾಗಿದ್ದ ಆಧಾರಸ್ಥಂಭವೇ ಕುಸಿದಂತಾಯಿತು. ಈಯಮ್ಮನ ಹಳೆಯ ವರಸೆಗಳನ್ನು ನೋಡಿದ್ದ ಸಿನಿಮಾ ಮಂದಿ ಹತ್ತಿರ ಸುಳಿಯಲಿಲ್ಲ. ಹೀಗಿರುವಾಗ ರಮ್ಯಾ ಸಿನಿಮಾಗೆ ರೀ ಎಂಟ್ರಿ ಮಾಡಬಹುದು ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ಮಾಜಿ ಸಂಸದೆಯ ಮನ ರಾಜಕಾರಣದಲ್ಲಿ ಗಿರಕಿ ಹೊಡೆಯಲಾರಂಭಿಸಿದೆ.
ಒಂದು ವೇಳೆ ಮತ್ತೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ನೆಲೆ ಕಾಣದೇ ಹೋದರೆ ಇಲ್ಲಿಂದಲೂ ಎಲ್ಲಾ ಪ್ಯಾಕಪ್ ಮಾಡಿ ದೇಶಾಂತರ ಹೋಗಬೇಕಾಗುತ್ತೆ. ಹೇಗಾದರೂ ಮಾಡಿ ಮತ್ತೆ ರಾಜ್ಯ ರಾಜಕಾರಣದಲ್ಲಿ ಜಾಂಡಾ ಊರಬೇಕೆಂಬ ಲೆಕ್ಕಾಚಾರದಲ್ಲಿ ಜ್ಯೂಲಿ ರೆಡಿಯಾಗುತ್ತಿದ್ದಾರೆ. ವಿವಾಹ ವಿಚಾರವನ್ನೇ ತಲೆಗೆ ಹಾಕಿಕೊಳ್ಳದೆ ಮತ್ತೆ ಪವರ್ ಕಾರಿಡಾರ್ನಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರೇ ಈಕೆಯನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ಮಾತನಾಡಿಸದವರನ್ನೆಲ್ಲ ತಾನೇ ಹುಡುಕಿಕೊಂಡು ಹೋಗಿ ಹಾಡಿ ಹೊಗಳಿ ಮುಖಸ್ತುತಿ ಮಾಡಿದರೂ ಅವರ ಗಂಟು ಮೋರೆಯ ಬಿಗಿ ಸಡಿಲವಾಗುತ್ತಿಲ್ಲ. ಇದು ರಮ್ಯಾ ಚಿಂತೆಗೆ ಕಾರಣವಾಗಿದೆ.
ಸಂಸದರಾಗಿದ್ದ ವೇಳೆ ರಾಜಕಾರಣದಲ್ಲಿ ಬೆಳೆಸಿದವರ ವಿರುದ್ಧವೇ ದರ್ಪ ತೋರುತ್ತಾ ಹೈಕಮಾಂಡ್ ಆಯ್ತು ನಾನಾಯ್ತು ಎಂದು ಮಾಡಿಕೊಂಡ ಎಡವಟ್ಟು ಈಗ ಅಷ್ಟು ಸುಲಭವಾಗಿ ಮತ್ತೆ ರಾಜ್ಯ ರಾಜಕೀಯ ಅಖಾಡಕ್ಕೆ ಮರಳಲು ಬಿಡುತ್ತಿಲ್ಲ. ದೆಹಲಿಯಲ್ಲೇ ಕುಳಿತು ಈಕೆ ತೋರಿದ್ದ ವರ್ತನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡಿರುವ ಕಾಂಗ್ರೆಸ್ನ ಘಟಾನುಘಟಿ ನಾಯಕರೇ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಮತ್ತೆ ಈ ಸೊಕ್ಕಿನ ಪದ್ಮಾವತಿಯನ್ನು ನಂಬಿದರೆ ಕರ್ಮ ಸುತ್ತಿಕೊಳ್ಳುತ್ತೆ ಅನ್ನುವ ಹಾಗೆ ಯಾರೂ ರಮ್ಯಾ ವಿಚಾರವಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ರಮ್ಯಾ ಮಾತ್ರ ಮತ್ತೆ ರಾಜಕಾರಣಕ್ಕೆ ಬರಲು ಶತಪ್ರಯತ್ನ ಮಾಡುತ್ತಿದ್ದಾರೆ. ಕಂಡ ಕಂಡ ನಾಯಕರನ್ನೆಲ್ಲಾ ಭೇಟಿ ಮಾಡುತ್ತಿದ್ದಾರೆ. ಇನ್ನು ಇಷ್ಟೆಲ್ಲಾ ಒಳಗೊಳಗೆ ಮಾಡುತ್ತಿದ್ದರೂ ಹೊರಗೆ ಮಾತ್ರ `ಸ್ಕಿçಪ್ಟ್ ಓದುತ್ತಿದ್ದೇನೆ. ಸರ್ಜರಿಯಿಂದ ದಪ್ಪಗಾಗಿದ್ದೇನೆ. ತೂಕ ಇಳಿಸೋಕೆ ವರ್ಕೌಟ್ ಮಾಡ್ತಿದ್ದೇನೆ’ ಎಂದು ರೀಲು ಬಿಡೋಕೆ ಶುರುವಾಗಿದ್ದಾರೆ. ಆದರೆ ಇದು ರೀಲೋ ರಿಯಲ್ಲೋ ಅನ್ನುವುದು ಇನ್ನೇನು ಮಾರ್ಚ್ನಲ್ಲಿ ಬಯಲಾಗಲಿದೆ.
ರಮ್ಯಾ ಕಣ್ಣು ಯಾವ ಕ್ಷೇತ್ರದಲ್ಲಿ?
ಒಂದು ಮೂಲದ ಪ್ರಕಾರ ಎಲ್ಲಿ ಗೆದ್ದು ಸೋತರೋ ಮತ್ತೆ ಅಲ್ಲೇ ಸ್ಥಾನ ಗಿಟ್ಟಿಸಲು ರಮ್ಯಾ ಕಾತರಿಸುತ್ತಿದ್ದಾರೆ. ಮಂಡ್ಯ ಸಹವಾಸವೇ ಬೇಡ ಎಂದು ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿಕೊಂಡು ಕದ್ದುಮುಚ್ಚಿ ಓಡಿಹೋಗಿದ್ದ ಆಕೆ ಅದೇ ಮಂಡ್ಯ ಜಿಲ್ಲೆ ರಾಜಕಾರಣ ಸೇರಲು ತವಕಿಸುತ್ತಿದ್ದಾರೆ. ಇದು ಗೊತ್ತಿದ್ದರೂ ಹಳೆಯ ಗುರು ಡಿ.ಕೆ. ಶಿವಕುಮಾರ್ ಹತ್ತಿರ ಸೇರಿಸುತ್ತಿಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರ ನನ್ನದು ಎಂದು ಈಗಾಗಲೇ ಡಿಕೆಶಿ ಶಿಷ್ಯ ರವಿ ಗಣಿಗ ಅಬ್ಬರಿಸುತ್ತಿದ್ದಾರೆ. `ಯಾರೇ ಇರಲಿ ಯಾರೇ ಬರಲಿ ಮಂಡ್ಯ ನನ್ನದು, ನಾನೇ ಇಲ್ಲಿನ ಮುಂದಿನ ಎಂಎಲ್ಎ’ ಎಂದು ಫಿಕ್ಸ್ ಆಗಿದ್ದಾರೆ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ರವಿ ಗಣಿಗ, ಈಗ ಗೆಲುವಿನ ಕನಸು ಕಾಣುತ್ತಿರುವುದು ಸುಳ್ಳಲ್ಲ. ರವಿಗೆ ಡಿಕೆಶಿ ಆಶೀರ್ವಾದವೂ ಇರುವುದರಿಂದ ಮತ್ತು ರಮ್ಯಾ ಬಗ್ಗೆ ಕಡುಕೋಪ ಇರುವುದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ಕನಸು ಮಾಜಿ ಸಂಸದೆಗೆ ದುಬಾರಿಯಾಗಿದೆ.
ಜೆಡಿಎಸ್ ಶಾಸಕ ಶ್ರೀನಿವಾಸ್ ಅವರ ಆರೋಗ್ಯ ಹದಗೆಟ್ಟಿದ್ದು ಚುನಾವಣೆಗೆ ನಿಲ್ಲುವುದು ಅನುಮಾನವಾಗಿದೆ. ಅಲ್ಲಿಗೆ ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಹೇಳಿಕೊಳ್ಳುವಂತಹ ಅಭ್ಯರ್ಥಿಗಳಿಲ್ಲದ ಕಾರಣ ರಮ್ಯಾ ಅವರನ್ನೇ ಕರೆತಂದು ನಿಲ್ಲಿಸಿದರೆ ಸುಲಭವಾಗಿ ಗೆಲ್ಲುವ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಕೂಡಾ ಸುಲಭವಲ್ಲ.
ಇಷ್ಟೆಲ್ಲಾ ಗ್ರೌಂಡ್ ರಿಪೋರ್ಟ್ ಇದ್ದಾಗಲೂ ರಮ್ಯಾ ಕಣ್ಣು ಮಾತ್ರ ಮಂಡ್ಯ ಜಿಲ್ಲೆಯಿಂದ ಕದಲುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದಿದ್ದರೂ ಜೆಡಿಎಸ್ಗೆ ಹಾರುವ ಚಿಂತನೆಯೂ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗಾಗಲೇ ರಾಜ್ಯ ಕಾಂಗ್ರೆಸ್ ಮುಖಂಡರುಗಳನ್ನೆಲ್ಲಾ ಭೇಟಿ ಮಾಡುತ್ತಿರುವ ರಮ್ಯಾ ನೇರ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಕಾಲು ಹಿಡಿದರೆ ರಾಜಕೀಯ ರೀ ಎಂಟ್ರಿ ದಾರಿ ಸುಗಮವಾಗಬಹುದು. ಆದರೆ ಡಿಕೆಶಿ ಅವರಿಗೆ ತಮ್ಮದೇ ಖಾಸಗಿ ಕಾರಣಗಳಿಂದಾಗಿ ರಮ್ಯಾ ಅವರನ್ನು ಮತ್ತೆ ಬೆಳೆಸುವುದು ಇಷ್ಟವಿಲ್ಲ. ಹಿಂದೆ ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಶತಪ್ರಯತ್ನ ಮಾಡುತ್ತಿದ್ದಾಗ ರಮ್ಯಾ, ಡಿಕೆಶಿ ವಿರೋಧಿಗಳ ಜೊತೆ ಸೇರಿ ಹೈಕಮಾಂಡ್ ಕಿವಿ ಕಚ್ಚಿ ಆ ಹುದ್ದೆ ತಪ್ಪುವಂತೆ ಮಾಡಿದ್ದರು.
ಈ ವಿಚಾರ ಆಗಲೇ ಡಿಕೆಶಿ ಕಿವಿಗೆ ಬಿದ್ದಿತ್ತು. ಅವರಲ್ಲಿರುವ ಹಳೆಯ ಸಿಟ್ಟು ಇನ್ನು ಹಾರಿಲ್ಲ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿ ಇತರೆ ನಾಯಕರು ರಮ್ಯಾ ಕುರಿತು ಸಕಾರಾತ್ಮಕ ಭಾವನೆ ಹೊಂದಿಲ್ಲ. ಇನ್ನು ಮಂಡ್ಯ ಜಿಲ್ಲೆ ಕಾಂಗ್ರೆಸ್ಸಿಗರAತೂ ರಮ್ಯಾ ಹೆಸರು ಕೇಳಿದರೆ ಸಿಡಿಯುತ್ತಾರೆ. ಹೀಗಾಗಿ ಪದ್ಮಾವತಿಗೆ ಊರೆಲ್ಲಾ ಶತ್ರುಗಳೇ. ಇದೇ ಕಾರಣಕ್ಕೆ ಆಕೆ ಕಳೆದ ಬಾರಿ ಮಾಡಿದ ತಪ್ಪುಗಳನ್ನೆಲ್ಲಾ ಮನ್ನಿಸಿಬಿಡಿ ಎಂದು ಕೈ ನಾಯಕರ ಮುಂದೆ ಮಂಡಿಯೂರುತ್ತಿದ್ದಾರೆ. ಕಡಿದುಹೋಗಿರುವ ಸಂಬಂಧ ಮತ್ತು ಸಂಪರ್ಕಗಳನ್ನೆಲ್ಲಾ ಮತ್ತೆ ಗಳಿಸಿಕೊಳ್ಳಲು ಶತಪ್ರಯತ್ನ ಮುಂದುವರೆಸಿದ್ದಾರೆ. ಎಸ್.ಎಂ. ಕೃಷ್ಣ ಮನಸ್ಸು ಮಾಡಿದರೆ ಮಾತ್ರವೇ ಡಿಕೆಶಿ ಮನ ಕರಗಿಸಬಲ್ಲರು. ರಮ್ಯಾಳಿಗೆ ರಾಜಕೀಯ ಮರು ಜನ್ಮ ಕೊಡಿಸಬಲ್ಲರು.
ದೆಹಲಿ ಬಾಗಿಲು ಬಂದ್?
ದೆಹಲಿ ರಾಜಕಾರಣ ರಮ್ಯಾ ಪಾಲಿಗೆ ಇನ್ನೆಂದೂ ತೆರೆಯದ ಬಾಗಿಲಾಗಿದೆ. ಈ ಹಿಂದೆ ಸಂಸದೆಯಾಗಿ ರಮ್ಯಾ ಗೆದ್ದಾಗ, ಗೆಲ್ಲಿಸಿದವರ ವಿಶ್ವಾಸ ಉಳಿಸಿಕೊಂಡು ಹೋಗಿದ್ದರೆ ಇಂದು ಈ ಸ್ಥಿತಿ ಕಾಡುತ್ತಿರಲಿಲ್ಲ. ಈಗಾಗಲೇ ರಮ್ಯಾ ಜಾಗವನ್ನು ಸುಮಲತಾ ಅವರು ತುಂಬಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಆದರೆ ಸುಮಲತಾ ಕಾಂಗ್ರೆಸ್ ಸೇರುವುದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಪುತ್ರ ಅಭಿಷೇಕ್ಗೆ ಟಿಕೆಟ್ ಖಾತ್ರಿಯನ್ನು ಅವಲಂಬಿಸಿದೆ.
ಒಂದು ವೇಳೆ ಮದ್ದೂರು ಟಿಕೆಟ್ ಅಭಿಷೇಕ್ಗೆ ಸಿಕ್ಕರೆ ಮುಂಬರುವ ಲೋಕಸಭಾ ಚುನಾವಣೆಯಿಂದ ಸುಮಲತಾ ದೂರ ಉಳಿಯಬಹುದು. ಅಂತಹ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಮೂಲಕ ಡಿಕೆಶಿ ಆಶೀರ್ವಾದ ಲಭಿಸಿದರೆ ರಮ್ಯಾ ಹಾದಿ ಸುಗಮವಾಗಬಹುದು. ರಮ್ಯಾ ಸಾಕು ತಂದೆ ಆರ್.ಟಿ. ನಾರಾಯಣ್ ಎಸ್.ಎಂ. ಕೃಷ್ಣ ಅವರ ಅತ್ಯಾಪ್ತ ಮಿತ್ರರಾಗಿದ್ದವರು. ಎರಡು ಜೀವ ಒಂದೇ ಆತ್ಮದಂತೆ ಇದ್ದವರು. ಈ ಕಾರಣಕ್ಕೆ ಎಸ್ಎಂಕೆ ಈಗಲೂ ರಮ್ಯಾ ಬಗ್ಗೆ ಮಮತೆ, ಕಾಳಜಿ ಹೊಂದಿದ್ದಾರೆ. ಇದು ಮಂಡ್ಯ ರೀ ಎಂಟ್ರಿಗೆ ಇರುವ ಸುಲಭ ಮಾರ್ಗ. ಆದರೆ ಇದು ಎಷ್ಟರಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕಿದೆ.
Comments