ಸ್ಯಾಂಡಲ್ ವುಡ್ ನಲ್ಲಿ ಹೀರೋಯಿನ್ ಎಂದಾಕ್ಷಣ ಚಿಕ್ಕ ಮಕ್ಕಳು ರಮ್ಯ ಎಂದು ಹೇಳುವ ಅದೊಂದು ಕಾಲವಿತ್ತು. ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯ ಉರುಫ್ ದಿವ್ಯ ಸ್ಪಂದನ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿ ತನ್ನದೇ ಆದ ಅಭಿಮಾನಿ ಬಳಗವನ್ನು ಭಗ್ನ ಪ್ರೇಮಿಗಳನ್ನು ಒಮ್ಮಿದೊಮ್ಮೆಲೆ ಸೃಷ್ಟಿಸಿಕೊಂಡುಬಿಟ್ಟಿದ್ದರು. ಅದಾದ ಮೇಲೆ ಅದಾವ ಮಾರಿ ಮಸಣಿ ಕಣ್ಣು ಬಿತ್ತೋ ಪಾಪ ಪದ್ಮಾವತಿಗೆ ಕನ್ನಡ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆಯಾಗಿ ಪೂರ್ಣ ಪ್ರಮಾಣದಲ್ಲಿ ರಾಜಕಾರಣದ ಕಡೆ ಮುಖ ಮಾಡಿದರು. ಮೇಲಾಗಿ ನಟಿಯಾಗಿದ್ದ ಅವರು ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡು ಎಲ್ಲೆಡೆ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ನಟಿ ಆಕೆ.
2012ರಲ್ಲಿ ಅನಿರೀಕ್ಷಿತವಾಗಿ ರಾಜಕೀಯರಂಗ ಪ್ರವೇಶಿಸಿದ ರಮ್ಯಾ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಗೆದ್ದು ಮತ್ತೊಮ್ಮೆ ಸೋಲನುಭವಿಸಿದ ರಮ್ಯಾ ಇದ್ದಕ್ಕಿಂದಂತೆ ಮಂಡ್ಯ ತೊರೆದು ಡೆಲ್ಲಿ ಸೇರಿದ್ದರು. ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನು ರಾತ್ರೋರಾತ್ರಿ ಕಳ್ಳಿಯಂತೆ ಖಾಲಿ ಮಾಡಿ ಮಂಡ್ಯ ಜನರ ಕೆಂಗಣ್ಣಿಗೂ ಗುರಿಯಾದರು. ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡುತ್ತಲೇ ಕಾಂಗ್ರೆಸ್ ಪಕ್ಷಕ್ಕೆ ತೀರಾ ನಿಷ್ಠೆಯಿಂದ ಇದ್ದು, ನರೇಂದ್ರ ಮೋದಿಯವರನ್ನು ಕಾಳೆಯಲು ಹೋಗಿ ಬಹುತೇಕ ಸಂದರ್ಭದಲ್ಲಿ ತಾನೇ ತೋಡಿದ್ದ ಖೆಡ್ಡಾಕ್ಕೂ ತುಪುಕ್ ಎಂದು ಬೀಳುತ್ತಲೇ ಇದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಅವರ ಬೆಂಬಲದಿಂದ ಮಂಡ್ಯದಲ್ಲಿ ಒಮ್ಮೆ ಸಂಸದೆಯಾಗಿ ಗೆದ್ದು, ಮಂಡ್ಯ ಕಡೆ ತಿರುಗಿಯೂ ನೋಡದ ರಮ್ಯ ಮತ್ತೊಮ್ಮೆ ಸೋತು ಡೆಲ್ಲಿ ಸೇರ್ಕೊಂಡಿದ್ದ ರಮ್ಯಾ ಮೇಡಂ ಕನ್ನಡ ಚಿತ್ರರಂಗಕ್ಕೆ ವಾಪಸ್ ಬರೋ ಸಾಧ್ಯತೆ ಗಳಿವೆಯಂತೆ. ಪಾಲಿಟಿಕ್ಸ್ ನಲ್ಲಿ ಅಷ್ಟೇನೂ ಬೇಳೆ ಬೇಯದ ಕಾರಣ ಬಣ್ಣದ ಲೋಕದಲ್ಲಾದರೂ ಮೊದಲಿದ್ದ ಹಾಗೆ ತನ್ನ ಹವಾ ಸೃಷ್ಟಿಸುವ ಮನಸ್ಸು ಮಾಡಿರುವ ರಮ್ಯ, ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ನಲ್ಲಿ ಕುಳಿತು ಡ್ಯಾಮೇಜ್ ಆಗಿರೋ ಇಮೇಜ್ನ್ನ ಸರಿ ಮಾಡಿಕೊಳ್ಳೊ ಪ್ರಯತ್ನ ಪಡ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ರಮ್ಯಾ ಸಾಧಕರ ಸೀಟ್ ಏರಲಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗುವ ಸಾಧ್ಯತೆ ಇದೆಯಂತೆ. ಮೋಹಕ ತಾರೆ ಹಿಂದೆ ಏನನ್ನೇ ಮಾಡಿರಲಿ, ಮಟ್ಟಿರಲಿ ಸದ್ಯಕ್ಕೆ ಆಕೆಯ ಮನಸ್ಸು ಬದಲಾಗಿ ನಾಯಕಿಯರ ಕೊರತೆಯಲ್ಲಿರುವ ಕನ್ನಡ ಚಿತ್ರರಂಗದ ಬೇಡಿಕೆಯನ್ನು ಕೆಲ ಕಾಲದ ಮಟ್ಟಿಗಾದರೂ ನೀಗಿಸುವಂತಾಗಲಿ. ಹಾರ್ಟ್ ಲೀ ವೆಲ್ ಕಮ್ ಜ್ಯೂಲಿ…