ಭಾರತದಾದ್ಯಂತ ಸೆನ್ಸೇಷನ್ ಸೃಷ್ಟಿಸಿದ ಸಿನಿಮಾ ಬಾಹುಬಲಿ. ಚಿತ್ರದಲ್ಲಿ ಬಾಹುಬಲಿ ಪಾತ್ರವೂ ಎಷ್ಟು ಫೇಮಸ್ ಆಗಿತ್ತೋ, ಬಲ್ಲಾಳ ದೇವನ ಪಾತ್ರವೂ ಅಷ್ಟೇ ಫೇಮಸ್ ಆಗಿತ್ತು. ಆ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಿದ್ದರು. ಅದಾದ ಮೇಲೆ ಬಹಳಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಬಲ್ಲಾಳದೇವ ಸದ್ಯ ಹೊಸ ಪ್ರಯೋಗವೊಂದಕ್ಕೆ ರೆಡಿಯಾಗುತ್ತಿದ್ದಾರೆ. ರಾಣಾ ಸ್ವಂತ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸುವ ಮೂಲಕ ಪೌರಾಣಿಕ ಸಿನಿಮಾವೊಂದನ್ನು ನಿರ್ಮಿಸಲು ತಯಾರಾಗಿದ್ದಾರೆ. ಹೌದು ಸುಮಾರು 60 ವರ್ಷಗಳ ಬಳಿಕ ಭಕ್ತ ಪ್ರಹ್ಲಾದ ಮತ್ತು ಹಿರಣ್ಯ ಕಶ್ಯಪು ಕಥೆಯ ಸಿನಿಮಾವೊಂದನ್ನು ಮಾಡಲಿದ್ದಾರೆ. ಬಹಳಷ್ಟು ದಿನಗಳಿಂದ ಈ ಕುರಿತು ಟಾಲಿವುಡ್ ನಲ್ಲಿ ಅಂತೆ ಕಂತೆಗಳು ಹರಿದಾಡುತ್ತಲೇ ಇದ್ದವು. ಆದರೆ ಯಾವುದೇ ಅಧಿಕೃತ ಸುದ್ದಿ ಹೊರಬಿದ್ದಿರಲಿಲ್ಲ. ಇದೀಗ ನಿರ್ದೆಶಕ ಗುಣಶೇಖರ್ ಸಿನಿಮಾಕ್ಕೆ ಸಂಬಂಧಿಸಿದ ಮಾಹಿತಿಯನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
Exciting journey with @RanaDaggubati for హిరణ్యకశ్యప #Hiranyakashyapa #OmNamoNarayanaya pic.twitter.com/7GujaMz0nu
— Gunasekhar (@Gunasekhar1) June 1, 2019
ಸತತ ಮೂರು ವರ್ಷಗಳಿಂದ ನಡೆದಿದ್ದ ಹಿರಣ್ಯ ಕಶ್ಯಪ ಸಿನಿಮಾದ ಫ್ರೀ ಪೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ರಾಣಾ ದಗ್ಗುಬಾಟಿ ಹಿರಣ್ಯಕಶ್ಯಪ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿಯೂ ತಿಳಿಸಿದ್ದಾರೆ. ಸದ್ಯ ರಾಣಾ ದಗ್ಗುಬಾಟಿ ಹಿಂದಿಯಲ್ಲಿ ಹೌಸ್ ಪುಲ್ 4, ವಿರಾಟ ಪರ್ವಂ, ಹಾತಿ ಮೇರೆ ಸಾತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಗುಣಶೇಖರ್ ರುದ್ರಮ್ಮದೇವಿ, ಸೈನಿಕುಡು, ಒಕ್ಕಡು, ಮೃಗರಾಜು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
No Comment! Be the first one.