ಮಾನಸಿ ಫಿಲ್ಮ್ಸ್ ಅಡಿಯಲ್ಲಿ ತಯಾರಾಗಿರುವ ‘ರಣಭೂಮಿ’ ಈದೇ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ರಣಭೂಮಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣವನ್ನು ಚಿರಂಜೀವಿ ದೀಪಕ್ ನಿಭಾಯಿಸಿದ್ದಾರೆ. ಈ ಹಿಂದೆ ಇವರು ‘ಜೋಕಾಲಿ’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಹ ನಿರ್ಮಾಪಕರಾಗಿ ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಜೊತೆಯಾಗಿರುವ ಈ ಚಿತ್ರದ ಉಪ ಶೀರ್ಷಿಕೆಯಲ್ಲಿ ‘ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂದು ಹೇಳಲಾಗಿದೆ. ಇದೊಂದು ಕ್ರೈಂ, ಸಸ್ಪೆಸ್, ಥ್ರಿಲ್ಲರ್ ಹಾಗೂ ಸಾಹಸ ಭರಿತವಾದ ಚಿತ್ರ. ಈ ಚಿತ್ರಕ್ಕಾಗಿ ೪೫ ದಿವಸಗಳ ಕಾಲ ಚಿತ್ರೀಕರಣ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಪ್ರದೀಪ್ ವರ್ಮಾ ಸಂಗೀತ, ವಿಜಯ ಭರಮಸಾಗರ ಗೀತೆಗಳು, ಛಾಯಾಗ್ರಾಹಕರಾಗಿ ನಾಗರ್ಜುನ್, ಕರ್ವ ವೆಂಕಿ ಸಂಕಲನ ಮಾಡಿದ್ದಾರೆ. ನಿರಂಜನ್ ಒಡೆಯರ್, ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಆರ್ ಭಟ್, ರಥಾವರ ಲೋಕಿ, ಡೇನಿಯಲ್ ಕುಟ್ಟಪ್ಪ, ಮುನಿ ಹಾಗೂ ಇತರರು ತಾರಗಣದಲ್ಲಿದ್ದಾರೆ.