ರಣಹೇಡಿ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ರೈತರ ಸಮಸ್ಯೆಗಳ ಕುರಿತು, ಕಮರ್ಷಿಯಲ್ಲಾಗಿ ಹೇಳಹೊರಟಿರುವ ಸಿನಿಮಾ ಇದು. ಇಂಥ ಸಿನಿಮಾಕ್ಕೆ ಬಂಡವಾಳ ಹೂಡಿರುವ ಸುರೇಶ್ ಅವರ ಜೊತೆಗಿನ ಮಾತುಕತೆಯ ಒಂದಿಷ್ಟು ವಿವರ ಇಲ್ಲಿದೆ…
ರಣಹೇಡಿ ಸಿನಿಮಾವನ್ನು ನಿರ್ಮಿಸಲು ಕಾರಣವೇನು?
ಈ ಚಿತ್ರದ ಕಥೆ ಕೇಳಿದಾಗ ಇದರಲ್ಲಿ ನೈಜತೆ ಇತ್ತು. ಈ ನೈಜತೆಯ ಬಗ್ಗೆ ನಿರ್ದೇಶಕ ಮನು ಅವರು ವಿವರಿಸಿದ್ದರು. ಸುಮಾರು ೨೫-೩೦ ವರ್ಷಗಳ ಹಿಂದೆ ಬರುತ್ತಿದ್ದಂತ ಕಥೆ. ಅದಾದ ನಂತರ ಈ ರೀತಿಯ ಕಥೆಗಳು ಅಪರೂಪವಾಗಿದ್ದವು. ಆದ್ದರಿಂದ ಈ ಕಥೆ ಮನಸ್ಸಿಗೆ ಬಹಳ ಹತ್ತಿರವಾಯಿತು.
ಈ ಚಿತ್ರದ ನಟರ ಕುರಿತು ತಿಳಿಸಿ.
ಈ ಚಿತ್ರದ ನಾಯಕ ನಟ ಕರ್ಣಕುಮಾರ್ ಅವರು ಬರೀ ಒಟ್ಟ ನಟನಾಗಿ ಅಲ್ಲದೆ ನಮ್ಮ ತಂಡದೊಂದಿಗೆ ಸೇರಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಬಹಳ ಚೆನ್ನಾಗಿ ಸಪೋರ್ಟ್ ಮಾಡಿದ್ದಾರೆ ಇವರ ಜೊತೆಗೆ ನಾಯಕ ನಟಿಯಾಗಿ ನಟಿಸಿರುವಂತಹ ಐಶ್ವರ್ಯ ರಾವ್ ಅವರೂ ಸಹ ಬಹಳ ಹೊಂದಾಣಿಕೆಯಿಂದ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ಬೇಬಿ ಚೈತನ್ಯ ಇವರೆಲ್ಲರಿಗೂ ಸವಾಲೆಂಬಂತೆ ನಟಿಸಿದ್ದಾರೆ.
ಈ ಚಿತ್ರದಲ್ಲಿನ ವಿಶೇಷತೆಗಳ ಬಗ್ಗೆ ತಿಳಿಸಿ.
ನಿಜ ಜೀವನದಲ್ಲಿನ ನಡೆಯುವಂತಹ ಘಟನೆಗಳನ್ನೇ ನೋಡಿ ಬರೆದಿದ್ದಾರೋ ಅಥವಾ ತಾನೇ ಅನುಭವಿಸಿ ಬರೆದಿದ್ದಾರೆ ಗೊತ್ತಿಲ್ಲ. ಆದರೆ ನನ್ನ ಅನುಭವಗಳು ಕೆಲವೊಂದು ನನಗೆ ಜ್ಞಾಪಕಕ್ಕೆ ಬಂದವು. ಹಳ್ಳಿಯಿಂದ ಪೇಟೆಗೆ ವಲಸೆ ಬರುವಂತಹ ಜನರಿಗೆ ಮನಮುಟ್ಟುವಂತಹ ಕಥೆ ಇದು.
ನಿರ್ದೇಶಕ ಮನು ಅವರ ಬಗ್ಗೆ ತಿಳಿಸಿ.
ಒಬ್ಬ ತರಕಾರಿ ಮಾರುವವನಾಗಿರಬಹುದು, ರೈತನಾಗರಿಬಹುದು, ಕೂಲಿ ಕೆಲಸದವನಾಗಿರಬಹುದು ಹೀಗೆ ಪ್ರತಿಯೊಬ್ಬರೂ ಹಳ್ಳಿಗೆ ಸಂಬಂಧಿಸವರನ್ನು ಈ ಪಾತ್ರಗಳನ್ನು ವಿಶೇಷವಾಗಿ ಅದಕ್ಕೊಂದು ರೂಪ ಕೊಟ್ಟು ಎಳೆಎಳೆಯಾಗಿ ಹಳ್ಳಿ ಜೀವನವನ್ನು ಬಿಡಿಸಿಟ್ಟಿದ್ದಾರೆ.
ಈ ಚಿತ್ರವನ್ನು ಯಾವ ಕಾರಣಕ್ಕಾಗಿ ನೋಡಲೇಬೇಕು?
ಚಿತ್ರದಲ್ಲಿ ಮುಖ್ಯವಾಗಿ ಬದುಕೋಕೆ ಬೇಕಾಗಿರುವುದು ಆಹಾರ. ಇದನ್ನ ಯಾರು ತಯಾರು ಮಾಡ್ತಾರೋ ಅವನೇ ನಿಜವಾದ ಹೀರೋ. ಇದೊಂದು ಯುನಿವರ್ಸಲ್ ಮೆಸೇಜ್ ಅಂತನೇ ಹೇಳಬಹುದು. ಈ ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದಾರೆ. ಸಾಹಿತ್ಯಕ್ಕೆ ತಕ್ಕಂತೆ ಜನಪದ ಮತ್ತು ದೇಸೀಯ ಸಾಹಿತ್ಯವನ್ನು ನೀಡಿದ್ದಾರೆ. ಪ್ರತಿಯೊಬ್ಬ ನಟರೂ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಿರ್ಮಾಪಕನಾಗಿ ಚಿತ್ರೀಕರಣದ ಅನುಭವ ಹೇಗಿತ್ತು?
ಈ ಚಿತ್ರದಲ್ಲಿ ಒಬ್ಬ ನಿರ್ಮಾಪಕನಾಗಿಲ್ಲದೆ, ನಿರ್ದೇಶಕರಾಗಲಿ, ಟೆಕ್ನೀಷಿಯನ್ಗಳಾಗಲೀ, ನಟರುಗಳಾಗಲೀ ಪ್ರತಿಯೊಬ್ಬರ ಜೊತೆಯಲ್ಲಿ ಒಬ್ಬ ಕೆಲಸಗಾರನಾಗಿಬೆರತು ಸಹಕಾರ ನೀಡುತ್ತಿದ್ದೆ.
ನಿರೂಪಣೆ : ಸುಮ .ಜಿ
No Comment! Be the first one.