ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಂಚಿ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದ ನಟ ಪ್ರಭು ಮುಂಡ್ಕುರ್ ರಾಂಚಿ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಲಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ಅವರದ್ದು ನಿರ್ದೇಶಕನ ಪಾತ್ರ.
ರಾಂಚಿ ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಆಧಾರಿಸಿ ಮಾಡುತ್ತಿರುವ ಸಿನಿಮಾವಾಗಿದ್ದು, ಇದೊಂದು ಜವಾಬ್ದಾರಿಯುತವಾದ ಪಾತ್ರ ಕೂಡ. ಈ ಪಾತ್ರವನ್ನು ನಿರ್ವಹಿಸುವಾಗ ನಿರ್ದೇಶಕರ ಕೆಲಸ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ತಿಳಿಯಿತು ಎನ್ನುತ್ತಾರೆ ನಾಯಕ ಪ್ರಭು ಮುಂಡ್ಕುರ್. ಇನ್ನು ಈ ಚಿತ್ರವನ್ನು ರುದ್ರ ಫಿಲಂ ಮತ್ತು ಗಿರಿಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ಆನಂದ್ ಮತ್ತು ಅರುಣ್ ನಿರ್ಮಾಣ ಮಾಡುತ್ತಿದ್ದಾರೆ.