ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿರುವ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ಸಿನಿಮಾ ರಾಂಧವ. ಆಗಸ್ಟ್ 15ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಿರುವ ಚಿತ್ರತಂಡ ಇತ್ತೀಚಿಗೆ ಸಿನಿಮಾ ಇತಿಹಾಸದಲ್ಲಿಯೇ ಮೊದಲ ಬಾರಿ ರಾಷ್ಟ್ರದ ಬೆನ್ನುಲುಬುಗಳಾದ ರೈತರು ಹಾಗೂ ಯೋಧರ ಕೈಯಲ್ಲಿ ಚಿತ್ರದ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿಸಿದೆ.
ಚಿತ್ರದಲ್ಲಿ ಭುವನ್ ಮೂರು ಶೇಡಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಎರಡು ಪಾತ್ರಗಳು ರಿವೀಲ್ ಕೂಡ ಆಗಿದೆ. ಮತ್ತೊಂದು ಪಾತ್ರದ ಪರಿಚಯ ಸಿನಿಮಾದಲ್ಲಿ ಕಾಣಬಹುದಾಗಿದೆ. ಇನ್ನು ಭುವನ್ ಗೆ ನಾಯಕಿಯಾಗಿ ಅಪೂರ್ವ ಶ್ರೀನಿವಾಸ್ ಜತೆಯಾಗಿದ್ದಾರೆ. ಸುನೀಲ್ ಆಚಾರ್ಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ರಾಂಧವ ಚಿತ್ರವನ್ನು ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕೆಲ ಭಾಗಗಳಲ್ಲಿ ಗ್ರಾಫಿಕ್ಸ್ ಅನ್ನು ಕೂಡ ಅಳವಡಿಸಲಾಗಿದೆಯಂತೆ.