ಸಿನಿಮಾ ರಿಲೀಸ್ ಆದಮೇಲೆ ಆ ಚಿತ್ರದ ಕುರಿತು ಪಾಸಿಟೀವ್ ನೆಗೆಟೀವ್ ಟಾಕು, ಪ್ರಶಂಸೆಯ ಸುರಿಮಳೆಗಳು, ಸೋಶಿಯಲ್ ಮೀಡಿಯಾದಲ್ಲಿ ಘರ್ಜನೆಗಳು ಆಗೋದು ಕಾಮನ್ನು. ಆದರೆ ಸಿನಿಮಾ ರಿಲೀಸ್ ಗೂ ಮುನ್ನವೇ ಕೆಲವು ಸಿನಿಮಾಗಳು ಸೃಷ್ಟಿಸೋ ಖದರ್ ಇರುತ್ತಲ್ಲಾ ಅದನ್ನ ಹೇಳೋಕು, ಕೇಳೋಕು ಮಜ ಅನ್ನಿಸುತ್ತೆ. ಅಂತಹ ದಾಖಲೆಗಳನ್ನು ಈಗಾಗಲೇ ಸಾಕಷ್ಟು ಸಿನಿಮಾಗಳು ಪುಡಿ ಪುಡಿ ಮಾಡಿವೆ. ಮಾಡುತ್ತಿವೆ.

ಸದ್ಯದ ಸುದ್ದಿ ಏನಂದ್ರೆ ಬಿಗ್ ಬಾಸ್ ಲವರ್ ಬಾಯ್ ಭುವನ್ ಪೊನ್ನಣ್ಣ ಅಭಿನಯದ ಹೊಸ ಸಿನಿಮಾ ರಾಂಧವ ಅದೇ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿರುವ ರಾಂಧವ ಈ ಮಧ್ಯೆ ಚಿತ್ರದ ಟೈಟಲ್ ಟ್ರ್ಯಾಕನ್ನು ಇಂದು ರಿಲೀಸ್ ಮಾಡಲು ಡಿಸೈಡ್ ಮಾಡಿದೆ. ಆದರೆ ಟೈಟಲ್ ಟ್ರ್ಯಾಕ್ ರಿಲೀಸ್ ಆಗೋಕು ಮುಂಚಿತವಾಗಿಯೇ ರಾಂಧವ ಸಿನಿಮಾ ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಬಿಡುಗಡೆಗೂ ಮುನ್ನವೇ ಈ ಜೋರಾದರೆ ಬಿಡುಗಡೆ ಆದ್ಮೇಲೆ ಏನ್ ಗತಿ!!!

ಇನ್ನು ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ 5 ಗಂಟೆಗೆ ರಿಲೀಸ್ ಆಗಲಿದೆ. ಇದರ ಜತೆಗೆ ಕ್ವಿಜ್ ಕಾಂಟೆಸ್ಟ್ ಒಂದನ್ನು ಸಹ ರಾಂಧವ ಟೀಮ್ ಆಯೋಜಿಸಿದೆ. ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಪ್ರತಿ ಸರಿ ಉತ್ತರಕ್ಕೆ ಒಂದೊಂದು ನಾಣ್ಯ ಹಾಗೂ ರಾಂಧವ ಟೀಶರ್ಟ್ ಒಟ್ಟಾಗಿ 100 ಬೆಳ್ಳಿ ನಾಣ್ಯ ಹಾಗೂ 300 ರಾಂಧವ ಟೀಶರ್ಟ್ ಗಳನ್ನು ನೀಡಲಾಗುವುದಂತೆ. ಯಾವುದಕ್ಕೂ ರಾಂಧವ ಫಾಲೋ ಮಾಡಿ, ಬೆಳ್ಳಿ ನಾಣ್ಯ ವಿತ್ ಟೀ ಶರ್ಟ್ ಪಡೆದುಕೊಳ್ಳಬಹುದು.

CG ARUN

ಅಮರ್ ಫ್ಲಾಪ್ ಬೆನ್ನಲ್ಲೇ ನಾಗಶೇಖರ್ ಹೊಸ ಸಿನಿಮಾ!

Previous article

ಬಹುಭಾಷಾ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು!

Next article

You may also like

3 Comments

  1. This will be rocking for 100 days. Awesome title track. Fantastic team. All the very best to the whole team of Randhawa specially Bhuvan Anna. U have done a great job. We know how hard u worked for this film. We and our support is always with this whole team. Let’s Rock it guys!

  2. This will be rocking for 100 days. Awesome title track. Fantastic team. All the very best to the whole team of Randhawa specially Bhuvan Anna. U have done a great job. We know how hard u worked for this film. We and our support is always with this whole team. Let’s Rock it guys!
    May saibaba bless this team.
    Eagerly waiting for the audio official launch and for the film to be released.

  3. Randhawa

Leave a reply

Your email address will not be published. Required fields are marked *