ಬಿಗ್ ಬಾಸ್ ನಿಂದ ಹೊರಬಂದ ಮೇಲಂತೂ ಭುವನ್ ಪೊನ್ನಣ್ಣ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದರು. ಸದ್ಯ ಅವರ ನಟನೆಯ ಬಹುನಿರೀಕ್ಷಿತ ರಾಂಧವ ಸಿನಿಮಾದ ಮೂಲಕ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಚಿತ್ರದಲ್ಲಿ ಭುವನ್ ಎರಡು ಶೇಡ್ ನಲ್ಲಿ ಅಬಿನಯಿಸಿದ್ದು, ಎರಡು ತಲೆಮಾರುಗಳ ರೋಚಕ ಕಥೆ ಇದಾಗಿರಲಿದೆಯಂತೆ. ಈಗಾಗಲೇ ರಾಂಧವ ವಿಭಿನ್ನ ಟ್ರೇಲರ್ ಮತ್ತು ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದು, ಇದೀಗ ಕರ್ನಾಟಕದ ವೈಭವವನ್ನು ಸಾರುವ ಶಾಕಿಂಗ್ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಹಾಡಿನಲ್ಲಿ ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಏನು ಮಾಡಿದನೆಂದು ಮಾರ್ಮಿಕವಾಗಿ ತೋರಿಸಿದ್ದಾರೆ.

 

ಧರೆಯ ಬೆರಗು ಸೊಗಡು ನಮ್ಮ ನಾಡುಎಂಬ ಸಾಲುಗಳುಳ್ಳ ಹಾಡಿನಲ್ಲಿ ನಮ್ಮ ಕರುನಾಡಿನ ವಿಶೇಷವಾದ ತಾಣಗಳನ್ನು ಪರಿಚಯಿಸಿದ್ದು, ಕನ್ನಡದ ಹೆಮ್ಮೆಯನ್ನು ಸಾರುವ ಗೀತೆ ಇದಾಗಿದೆ. ಹಾಡನ್ನು ಕೇಶವಚಂದ್ರ ರಚಿಸಿದ್ದು, ಮದ್ವೇಶ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ಕರ್ನಾಟದಕ 28 ರಮಣೀಯ ಕ್ಷೇತ್ರಗಳಲ್ಲಿ ಹಾಡನ್ನು ಚಿತ್ರೀಕರಿಸಿ, ಮೂಲಕ ಕರುನಾಡಿನ ಹಿರಿಮೆಯನ್ನು ಸಾರುವ ಪ್ರಯತ್ನವನ್ನು ಮಾಡಿದ್ದಾರೆ. ಅಂದ ಹಾಗೆ ಹಾಡು ಆನಂದ್ ಆಡಿಯೋ ಸಂಸ್ಥೆಯ ಯುಟ್ಯೂಬ್ ಚಾನಲ್ ನಿಂದ ರಿಲೀಸ್ ಆಗಿದೆ. ಚಿತ್ರಕ್ಕೆ ಶಶಾಂಕ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಸನತ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುನೀಲ್ ಆಚಾರ್ಯ ನಿರ್ದೇಶವಿರುವ ಚಿತ್ರವು ಜುಲೈ ತಿಂಗಳಲ್ಲಿ ತೆರೆಗೆ ಬರಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅಚ್ಚರಿ ಹುಟ್ಟಿಸಿದ ಭುವನ್ ಗಳು!

Previous article

ಎಣ್ಣೆ ಏಟಲ್ಲಿ ಯಡವಟ್ಟು ಮಾಡಿಕೊಂಡ ಶಶಿ!

Next article

You may also like

Comments

Leave a reply

Your email address will not be published. Required fields are marked *