ಬಿಗ್ ಬಾಸ್ ನಿಂದ ಹೊರಬಂದ ಮೇಲಂತೂ ಭುವನ್ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ಆರಂಭಿಸಿದ್ದರು. ಜತೆಗೆ ಕಿರು ಧಾರವಾಹಿಯಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಳಿಸಿದ್ದರು. ಸದ್ದಿಲ್ಲದೇ ತಮ್ಮ ಚೊಚ್ಚಲ ಚಿತ್ರ ರಾಂಧವವನ್ನು ಮಾಡಿ ಮುಗಿಸಿರುವ ಭುವನ್ ಸದ್ಯ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ರಾಂಧವ ಚಿತ್ರದ ಪ್ರೊಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಭುವನ್ ಅಲ್ಲಲ್ಲಿ ಸಂದರ್ಶನದ ಮೂಲಕವೂ ನೋಡುಗರ ಗಮನ ಸೆಳೆಯುತ್ತಿದ್ದಾರೆ.
ಎಲ್ಲರಿಗೂ ತಿಳಿದಂತೆ ಭುವನ್ ಚಾಕೋಲೇಟ್ ಬಾಯ್. ಜತೆಗೆ ಎದುರಿಗೆ ಯಾರಿದ್ದರೂ ನೇರವಾಗಿ ನಿಷ್ಠೂರವಾಗಿ ಅನ್ನಿಸಿದ್ದನ್ನು ಹೇಳಬಲ್ಲ ಧೈರ್ಯ ಅವರಿಗೆ ರಕ್ತಗತವಾಗಿಯೇ ಬಂದಿರುವಂತದ್ದು. ಆ ಕಾರಣವಾಗಿ ಸಾಕಷ್ಟು ಮಂದಿ ಇವರನ್ನು ಕಂಡರೆ ಹಲ್ಲು ಹಲ್ಲು ಮಸೆಯುವುದು ಉಂಟು. ಅವ್ಯಾವುದಕ್ಕೂ ಕೇರ್ ಮಾಡದೇ ” ನಾನು ಮುಖವಾಡ ಹಾಕ್ಕೊಂಡು ಬದುಕೋನಲ್ಲ. ನನಗೆ ಗರ್ಲ್ ಫ್ರೆಂಡ್ಸ್ ಇದಾರೆ. ಅವರ ಜತೆಗೆ ಸಿಕ್ಕಾಪಟ್ಟೆ ಪಾರ್ಟಿ ಮಾಡ್ತೀನಿ. ನನ್ನ ಮಗಳು ಸಂಪ್ರದಾಯಸ್ಥೆ ಥರ ಇರಬೇಕು ಅಂತ ಎಕ್ಸ್ ಪೆಕ್ಟ್ ಮಾಡಿ ಥಿಯೇಟರ್ ನಲ್ಲಿ ಮಗಾ.. ಏನೋ ಅವಳ ತೊಡೆನೇ ಕಾಣುಸ್ತಿಲ್ಲ ಅಂತ ಕಮೆಂಟ್ ಮಾಡುವ ಕೆಟಗೆರಿ ನನ್ನದಲ್ಲ. ಅನ್ನಿಸಿದ್ದನ್ನು ಯಾವ ಅಳುಕಿಲ್ಲದೇ ಹೇಳಬಲ್ಲೆ.. ಎಂದು ನಸುನಗುತ್ತಾರೆ ಭುವನ್.
ಇದೇ ಆಗಸ್ಟ್ 23ರಂದು ರಾಂಧವ ದ್ವಿಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಭುವನ್ ತ್ರಿಬಲ್ ಶೇಡಿನಲ್ಲಿ ನಟಿಸಲಿದ್ದಾರೆ. ಈಗಾಗಲೇ ಎರಡು ಶೇಡಿನ ಪಾತ್ರಗಳು ರಿವೀಲ್ ಆಗಿದ್ದು, ಮತ್ತೊಂದು ಶೇಡ್ ಯಾವುದು ಎಂಬುದಕ್ಕೆ ಥಿಯೇಟರ್ ನಲ್ಲಿ ಉತ್ತರ ಸಿಗಲಿದೆ. ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ.