ರಾಂಧವ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ. ಸುನೀಲ್ ಆಚಾರ್ಯ ನಿರ್ದೇಶನದ ಈ ಚಿತ್ರದ ಮೊದಲ ಟ್ರೈಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ರಾಂಧವನತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಈ ಮೂಲಕ ಭುವನ್ ಹುಟ್ಟು ಹಬ್ಬದ ನಿಮಿತ್ತವಾಗಿ ಚಿತ್ರತಂಡ ಮಾಡಿರೋ ಈ ಪ್ರಯತ್ನವೂ ವ್ಯಾಪಕ ಮನ್ನಣೆ ಪಡೆದುಕೊಂಡಿದೆ.
ಇದು ಭುವನ್ ಪಾಲಿಗೆ ರಾಂಧವ ಟೀಮ್ ನೀಡಿರೋ ಬರ್ತಡೇ ಗಿಫ್ಟ್. ಪ್ರೇಕ್ಷಕರ ಪಾಲಿಗೆ ಹೊಸಾ ವರ್ಷದ ಕೊಡುಗೆಯೂ ಹೌದು. ಅಂಥಾ ಹೊಸತನದೊಂದಿಗೆ ಈ ಟ್ರೈಲರ್ ಅನ್ನು ರೂಪಿಸಲಾಗಿದೆ. ಇದುವೇ ರಾಂಧವ ಚಿತ್ರದ ಬಗ್ಗೆ ಮತ್ತಷ್ಟು ಕ್ರೇಜ್ ಹುಟ್ಟಿಕೊಳ್ಳಲೂ ಕಾರಣವಾಗಿದೆ.
ಕೊಂಚ ತಡವಾದರೂ ಎಲ್ಲರೂ ಮೆಚ್ಚಿಕೊಳ್ಳುವಂಥಾ, ಅಂದುಕೊಂಡಿದ್ದೆಲ್ಲವೂ ಸಾಕಾರಗೊಂಡಂಥಾ ಚಿತ್ರವನ್ನೇ ಮಾಡಬೇಕೆಂಬುದು ನಿರ್ದೇಶಕ ಸುನೀಲ್ ಅವರ ಒತ್ತಾಸೆ. ಅದಿಲ್ಲದೇ ಹೋಗಿದ್ದರೆ ಎರಡು ವರ್ಷ ಪಟ್ಟು ಹಿಡಿದು ರಾಂಧವನನ್ನು ರೂಪಿಸೋದು ಸಾಧ್ಯವಾಗುತ್ತಿರಲಿಲ್ಲ. ಈ ಕಥೆ ಅಂಥಾ ಧ್ಯಾನವನ್ನ ಬೇಡುವಂಥಾದ್ದು. ಅದು ಈಗಾಗಲೇ ಬಿಡುಗಡೆಯಾಗಿರೋ ಎರಡು ಟ್ರೈಲರ್‌ಗಳ ಮೂಲಕವೇ ಸ್ಪಷ್ಟಗೊಂಡಿದೆ. ಸದ್ಯ ಬಿಡುಗಡೆಯಾದ ಘಳಿಗೆಯಿಂದಲೇ ಬರುತ್ತಿರೋ ಒಳ್ಳೆ ಅಭಿಪ್ರಾಯಗಳಿಂದ ರಾಂಧವ ಟೀಮ್ ಖುಷಿಗೊಂಡಿದೆ. ಆದಷ್ಟು ಶೀಘ್ರದಲ್ಲಿಯೇ ರಾಂಧವನ ದರ್ಶನವೂ ಆಗಲಿದೆ…
https://youtu.be/eRpnWE0j_mQ #