ಪುಟ 109, ತ್ರಯಂಬಕದಂತಹ ಥ್ರಿಲ್ಲರ್ ಸಿನಿಮಾದ ನಂತರ ದಯಾಳ್ ಪದ್ಮನಾಭನ್ ಮಹಿಳಾ ಪ್ರಧಾನ ಸಿನಿಮಾ ರಂಗನಾಯಕಿಯಲ್ಲಿ ತೊಡಗಿಕೊಂಡಿರೋದು ಹಳೆಯ ವಿಚಾರ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ರಂಗನಾಯಕಿ, ಸದ್ದಿಲ್ಲದೇ ಡಬ್ಬಿಂಗ್ ಕೆಲಸದಲ್ಲಿ ಈಗಾಗಲೇ ಬ್ಯುಸಿಯಾಗಿದೆ. ರಂಗನಾಯಕಿಯಾಗಿ ಅಧಿತಿ ಪ್ರಭುದೇವ್ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಇಬ್ಬರು ನಾಯಕರ ಪೈಕಿ ಬೀರ್ ಬಲ್ ಖ್ಯಾತಿಯ ಎಂ.ಜಿ. ಶ್ರೀನಿವಾಸ್ ಡಬ್ಬಿಂಗ್ ನಲ್ಲಿ ಪಾಲ್ಗೊಂಡಿರುವ ಕುರಿತಾಗಿ ದಯಾಳ್ ಪದ್ಮನಾಭನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಸ್ಟೊಂದನ್ನು ಶೇರ್ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಚಿತ್ರದ ಮೇಲೆ ಬಹಳಷ್ಟು ಭರವಸೆಯನ್ನು ಹುಟ್ಟುಹಾಕಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ರಂಗನಾಯಕಿ ಚಿತ್ರವು ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಅದೇ ಟೈಟಲ್ ನ್ನು ಕಥೆಗೆ ಅನುಗುಣವಾಗಿ ಬಳಕೆ ಮಾಡಿಕೊಂಡಿದ್ದು, ಮತ್ತಾವುದೇ ಸಂಬಂಧವೂ ಹಳೆ ರಂಗನಾಯಕಿಗೂ ಹೊಸ ರಂಗನಾಯಕಿಗೂ ಇಲ್ಲವಂತೆ.
Leave a Reply
You must be logged in to post a comment.