ರಂಗನಾಯಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಲು ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನಿರ್ಮಾಪಕ ಎಸ್.ವಿ. ನಾರಾಯಣ್ ಮುಂದಾಗಿದ್ದಾರೆ. ಒಂದು ಸಿನಿಮಾ ಬಿಡುಗಡೆಗೆ ಮುನ್ನವೇ ಗೆಲುವಿನ ನಗೆ ಬೀರುವುದೆಂದರೆ ಸಾಮಾನ್ಯ ವಿಚಾರವಲ್ಲ. ಈ ನಿಟ್ಟಿನಲ್ಲಿ ರಂಗನಾಯಕಿ ತಂಡ ಖುಷಿಯಾಗಿದೆ. ಅದಕ್ಕೆ ಕಾರಣವೇನು ಅಂಥಾ ಸ್ವತಃ ದಯಾಳ್ ಪದ್ಮನಾಭನ್ ಇಲ್ಲಿ ಮಾತಾಡಿದ್ದಾರೆ…
ನಿರೂಪಣೆ: ಸುಮ .ಜಿ
– ಈಗಾಗಲೇ ನೀವು ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದೀರ. ಅವುಗಳಲ್ಲಿ ರಂಗ ನಾಯಕಿ ಹೇಗೆ ಡಿಫರೆಂಟ್ ಅನ್ನೋದು ನಿಮ್ಮ ಅಭಿಪ್ರಾಯ? : ಒಂದು ಸಿನಿಮಾ ನೋಡೋಕೆ ಎರಡು ರೀತಿಯ ಕ್ಯಾಟಗರಿಗಳಿರುತ್ತವೆ. ಒಂದು ಎಂಟರ್ಟೈನ್ಮೆಂಟ್ ಮತ್ತೊಂದು ಎಂಗೇಜಿಂಗ್ ಆಗಿರಬೇಕು. ಇದು ಎರಡನೇ ಕ್ಯಾಟಗರಿನಲ್ಲಿ ಬರುವಂತಹ ಸಿನಿಮಾ. ಈ ಸಿನಿಮಾ ತುಂಬಾ ಎಂಗೇಜಿಂಗ್, ಎಜುಕೇಟಿವ್, ಇನ್ಫರ್ಮೆಟಿಕ್, ಆಗಿರುತ್ತೆ. ಹೆಣ್ಣುಮಕ್ಕಳನ್ನ ನಾವು ಹೇಗೆ ರೆಸ್ಪೆಕ್ಟ್ ಮಾಡ್ಬೇಕು, ಹೇಗೆ ಬೆಲೆ ಕೊಡಬೇಕು, ಹೇಗೆ ಹಾನರ್ ಮಾಡ್ಬೇಕು ಅನ್ನೋದನ್ನ ಈ ಸಿನಿಮಾ ತಿಳಿಸುತ್ತೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ನಾವು ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದು ಎಲ್ಲರಿಗೂ ತಿಳಿದಿರುತ್ತೆ. ಆದರೆ ಈ ಸಿನಿಮಾ ನಮ್ಮನ್ನು ನೆಕ್ಸ್ಟ್ ಲೆವೆಲ್ಗೆ ಕರೆದೊಯ್ಯುತ್ತದೆ. ಕುಟುಂಬದೊಂದಿಗೆ ನೋಡುವಂತಹ ಸಿನಿಮಾ, ಎಲ್ಲರೂ ಸಿನಿಮಾ ನೋಡ್ಬೇಕು ಅಂತ ಕೇಳಿಕೊಳ್ಳುತ್ತೇನೆ. ಈ ಸಿನಿಮಾ ಬೇರೆ ಸಿನಿಮಾಕ್ಕಿಂತ ಡಿಫರೆಂಟ್ ಅಂತ ಹೇಳೋದು ಸಾಮಾನ್ಯ ಮಾತಾಗುತ್ತದೆ. ಈ ಚಿತ್ರ ನನ್ನ ಸೆಕೆಂಡ್ ಇನ್ನಿಂಗ್ಸ್ ಅಂತನೇ ಹೇಳಬಹುದು. ಮೊದಲನೇ ಇನ್ನಿಂಗ್ಸ್ನಲ್ಲಿ ಕಮರ್ಷಿಯಲ್ ಸಿನಿಮಾಗಳನ್ನ ಮಾಡಿಕೊಂಡು ಬಂದೆ ಈಗ ಎರಡನೇ ಇನ್ನಿಂಗ್ಸ್ನಲ್ಲಿ ಕಂಟೆಡ್ ಓರಿಯಂಟ್ ಸಿನಿಮಾಗಳನ್ನ ಮಾಡಿಕೊಂಡು ಬರುತ್ತಿದ್ದೇನೆ. ಮಹಿಳೆಯರಿಗೆ ಗೌರವ ಕೊಡುವಂತಹ ವ್ಯಕ್ತಿ ನಾನು. ಮಹಿಳಾ ಉದ್ದೇಶಿತವಾಗಿ ತೆಗೆದ ನನ್ನ ಮೊದಲನೇ ಚಿತ್ರ ರಂಗನಾಯಕಿ. ಆದ್ದರಿಂದ ಈ ಚಿತ್ರ ನನಗೆ ತುಂಬಾ ಸ್ಪೆಷಲ್ ಅಂತನೇ ಹೇಳಬಹುದು.
– ರಂಗನಾಯಕಿ ಕತೆ ನಿಮ್ಮಲ್ಲಿ ಹುಟ್ಟಿಕೊಂಡ ಸಂದರ್ಭದ ಬಗ್ಗೆ ಹೇಳಿ… : ದೆಹಲಿಯಲ್ಲಿ ನಡೆದ ನಿರ್ಭಯಾಳ ಗ್ಯಾಂಗ್ ರೇಪ್ ಬಗ್ಗೆ ನನಗೆ ತುಂಬಾ ಅಸಹ್ಯ ಹುಟ್ಟಿತು. ಆ ವೇಳೆಯಲ್ಲಿ ಒಂದುವೇಳೆ ನಿರ್ಭಯಾ ಬದುಕಿ ಉಳಿದಿದ್ದರೆ ಸಮಾಜಕ್ಕೆ ಅವಳು ಹೇಗೆ ಪ್ರತಿಕ್ರಿಯಿಸುತ್ತಿದ್ದಳು, ಆ ಸಂದರ್ಭವನ್ನು ಹೇಗೆ ನಿಭಾಯಿಸುತ್ತಿದ್ದಳು ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡವು. ಅದನ್ನ ನಾನು ಒಂದು ಕಾದಂಬರಿಯಾಗಿ ಬರೆಯಲು ಶುರುಮಾಡಿಕೊಂಡೆ. ಅದಕ್ಕೆ ಒಂದು ರೂಪು ಕೊಟ್ಟು ಸಿನಿಮಾ ಮಾಡಲು ಪ್ರೇರೇಪಣೆಯಾಯಿತು.
– ಚಿತ್ರದ ಪಾತ್ರಗಳು ಮತ್ತು ಪಾತ್ರಧಾರಿಗಳ ಬಗ್ಗೆ ತಿಳಿಸಿ : ರಂಗನಾಯಕಿ ಟೈಟಲ್ ಕ್ಯಾರೆಕ್ಟರ್ನಲ್ಲಿ ಅದಿತಿ ಪ್ರಭುದೇವ ಅವರು ನಟಿಸಿದ್ದಾರೆ. ಅವರು ಒಳ್ಳೆಯ ನಟಿ. ಅವರ ತಂದೆಗೆ ಈ ಚಿತ್ರದ ಕಥೆಯನ್ನು ಹೇಳಿದ ತಕ್ಷಣ ಬಾವುಕರಾದರು. ಅದಿತಿ ಪ್ರಭುದೇವ ಅವರೂ ಸಹ ತಕ್ಷಣ ಒಪ್ಪಿದರು. ಮಹಿಳಾ ಪಾಧಾನ್ಯ ಚಿತ್ರದಲ್ಲಿ ನಾಯಕನಿಗೇನು ಸ್ಕೋಪ್ ಇರುವುದಿಲ್ಲ ಅಂತ ಬಹಳಷ್ಟು ನಾಯಕ ನಟರು ಈ ಚಿತ್ರವನ್ನು ಒಪ್ಪಲಿಲ್ಲ. ಆದರೆ ನಟ ನಿರ್ದೇಶಕರ ಶ್ರೀನಿವಾಸ್ ಹಾಗೂ ಪದ್ಮಾವತಿ ಧಾರಾವಾಹಿ ನಾಯಕ ನಟ ತ್ರಿವಿಕ್ರಮ್ ಅವರು ಒಪ್ಪಿಕೊಂಡರು. ಹಿರಿಯ ನಟ ಶಿವರಾಂ, ಸುಚೇಂದ್ರ ಪ್ರಸಾದ್, ಚಂದ್ರಚೂಡ್, ಶೃತಿ ನಾಯಕ್ ಇವರುಗಳ ತಾರಾಗಣ ಈ ಚಿತ್ರಕ್ಕಿದೆ.
– ರಂಗನಾಯಕಿ ಚಿತ್ರ ಗೋವಾ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾದ ಬಗ್ಗೆ ಹೇಳಿ : ಇಂಡಿಯನ್ ಗವರ್ಮೆಂಟ್, ಇಂಡಿಯನ್ ಇಫರ್ಮೇಷನ್ & ಬ್ರಾಡ್ಕ್ಯಾಸ್ಟ್ ಡಿಪಾರ್ಟ್ಮೆಂಟ್ ಪ್ರತಿ ವರ್ಷ ಗೋವಾದಲ್ಲಿ ನಡೆಸುವಂತಹ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (IಈI) ಇದರಲ್ಲಿ ಇಂಡಿಯನ್ ಸಿನಿಮಾದ ಒಂದು ಸೆಕ್ಷನ್ ಇರುತ್ತದೆ. ಸುಮಾರು ೨೫ ರಿಂದ ೨೬ ಸಿನಿಮಾಗಳು ಇದರಲ್ಲಿ ಪ್ಲೇ ಮಾಡಲಾಗುತ್ತದೆ. ಇದು ನ್ಯಾಷನಲ್ ಅವಾರ್ಡ್ಗೆ ಸರಿಸಮಾನವಾಗಿದೆ ಎಂದೇ ಹೇಳಬಹುದು. ಇದರಲ್ಲಿ ಇಂಡಿಯಾದ ಎಲ್ಲಾ ಭಾಷೆಗಳಿಂದ ೩೦೦ರಿಂದ ೪೦೦ ಸಿನಿಮಾಗಳು ಇದಕ್ಕೆ ಅಪ್ಲೈ ಮಾಡಿರುತ್ತಾರೆ. ಅದರಲ್ಲಿ ಈ ಬಾರಿ ಆಯ್ಕೆ ಆಗಿರುವಂತೆ ಏಕೈಕ ಕನ್ನಡ ಸಿನಿಮಾ ರಂಗನಾಯಕಿ. ಸಿನಿಮಾದ ಕಥೆ ಇರಬಹುದು, ಎಮೋಷನ್ ಆಗಿ ಮಾಡಿರುವಂತದ್ದು ಇರಬಹುದು ಜ್ಯೂರಿ ಮೆಂಬರ್ಸ್ಗೆ ಇಷ್ಟವಾಗಿ ಈ ಚಿತ್ರವನ್ನು ಆಯ್ಕೆ ಮಾಡಿರಬಹುದು. ಒಂದು ಸ್ಟೇಟ್ ಅವಾರ್ಡ್, ಒಂದು ನ್ಯಾಷನಲ್ ಅವಾರ್ಡ್ ಅಥವಾ ಇಂಡಿಯನ್ ಪನೋರಮಾ ಇರಬಹುದು ಇವುಗಳಲ್ಲಿ ಆಯ್ಕೆಯಾಗುವುದು ಒಬ್ಬ ಸಿನಿಮಾ ನಿರ್ಮಾಪಕನಿಗೆ ಸಾಧನೆಯ ವಿಷಯ ಅಂತಲೇ ಹೇಳಬಹುದು.