ಟಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ರಾಮ್ ಚರಣ್ ಮತ್ತು ಸಮಂತಾ ಅಭಿನಯದ ರಂಗಸ್ಥಲಂ ಚಿತ್ರ ಕನ್ನಡಕ್ಕೆ ರಂಗಸ್ಥಳವಾಗಿ ಡಬ್ ಆಗಲಿದೆ. ಈಗಾಗಲೇ ಈ ಸಿನಿಮಾದ ಹಾಡುಗಳು ಒಂದೊಂದಾಗಿ ಕನ್ನಡದಲ್ಲಿ ರಿಲೀಸ್ ಆಗಿದ್ದು, ಇದೀಗ ಇನ್ನೊಂದು ಸೂಪರ್ ಹಿಟ್ ಹಾಡು ಕನ್ನಡದಲ್ಲಿ ರಿಲೀಸ್ ಆಗಲಿದೆ. ತೆಲುಗಿನ ರಂಗಮ್ಮ ಮಂಗಮ್ಮ ಹಾಡನ್ನು ಯೂಟ್ಯೂಬ್ ನಲ್ಲಿ ಇಲ್ಲಿವರೆಗೆ 8 ಕೋಟಿಗೂ ಅಧಿಕ ಹಿಟ್ ಗಳಿಸಿದೆ.
ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಈ ಹಾಡನ್ನು ಎಂಎಂ ಮಾನಸಿ ಹಾಡಿದ್ದರು. ಸದ್ಯ ಕನ್ನಡದಲ್ಲಿ ಈ ಹಾಡು ಗಂಗಮ್ಮ ಮಂಗಮ್ಮ ಎಂದು ರಚನೆಯಾಗಿದ್ದು, ಯೂಟ್ಯೂಬ್ ನಲ್ಲಿ ಕನ್ನಡದಲ್ಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೂ 1.7 ಲಕ್ಷ ಹಿಟ್ ಪಡೆದಿದ್ದು, ಮೂಲ ಹಾಡನ್ನು ಹಾಡಿದ್ದ ಮಾನಸಿಯೇ ಕನ್ನಡ ಗೀತೆಗೂ ದನಿಯಾಗಿದ್ದಾರೆ. ಕನ್ನಡದ ಹಾಡನ್ನು ಆಜಾದ್ ವರದರಾಜ್ ರಚಿಸಿದ್ದು, ತೆಲುಗಿನ ಹಾಡನ್ನು ಚಂದ್ರಬೋಸ್ ರಚಿಸಿದ್ದರು. ರಂಗಸ್ಥಲಂ ಸಿನಿಮಾವನ್ನು 60 ಕೋಟಿ ಬಜೆಟ್ ನಲ್ಲಿ ಸುಕುಮಾರ್ ನಿರ್ದೆಶನ ಮಾಡಿದ್ದರು. ಇದೀಗ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಅಗಲು ರೆಡಿಯಾಗಿದ್ದೂ ರಾಮಚರಣ್ ಮತ್ತು ಸಮಂತಾ ಜೋಡಿ ಕನ್ನಡ ನೆಲದಲ್ಲೂ ರಾರಾಜಿಸಲಿದ್ದಾರೆ.
Leave a Reply
You must be logged in to post a comment.