ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರೂ ಗೆಸ್ ಮಾಡಲು ಸಾಧ್ಯವಾಗುವುದಿಲ್ಲ. ಕುರಿಕಾಯುತ್ತಾ ತನಗಿಷ್ಟಬಂದಂತೆ ಹಾಡುತ್ತಿದ್ದ ಅನುಮಂತ ಸರಿಗಮಪ ಸೀಜನ್ 15ರ ರನ್ನರ್ ಅಪ್ ಆಗುತ್ತಾನೆಂದರೆ ತಮಾಷೆಯ ಮಾತೇ.. ಮಲಯಾಳಂ ಸಿನಿಮಾದ ದೃಶ್ಯವೊಂದರಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಅವರದ್ದು ಅದೃಷ್ಟವಲ್ಲದೇ ಮತ್ತೇನು.

ಯೋಗ್ಯತೆ ಮತ್ತು ಯೋಗವಿದ್ದರೆ ಅವಕಾಶಗಳು ಹಿತ್ತಲಿನಿಂದಾದರೂ ಬರುತ್ತದೆ ಎಂಬುದಕ್ಕೆ ರಾಣು ಮಂಡಾಲ್ ಅವರೇ ಸಾಕ್ಷಿ. ಯೆಸ್.. ರೈಲ್ವೆ ಸ್ಟೇಷನ್ನಿನಲ್ಲಿ ಹಾಡುತ್ತಿದ್ದ ಮಹಿಳೆಯೊಬ್ಬರು ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿದ್ದಾರೆ. ಅವರ ಕಂಠದಲ್ಲಿ ಮೂಡಿ ಬಂದಿರುವ ಬಾಲಿವುಡ್ ನ ಹಳೇ ಹಾಡುಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ‘ಏಕ್​ ಪ್ಯಾರ್​ ಕಾ ನಗ್ಮಾ ಹೈ…..’ ಲತಾ ಮಂಗೇಶ್ಕರ್​ ಹಾಡಿರುವ ಹಾಡನ್ನು ಕೇಳಿದ್ದವರಿಗೆ ರಾಣು ರಾಣು ಮಂಡಾಲ್ ಅವರ ಈ ಕಂಠದಲ್ಲಿ ಈ ಹಾಡು ಕೇಳುತ್ತಿರುವುದು ನಿಜಕ್ಕೂ ಖುಷಿ ನೀಡಿದೆ.

ರಾಣಾಫಾಟ್​​ ರೈಲ್ವೆ ನಿಲ್ದಾಣದಲ್ಲಿ ಮಧುರವಾದ ಕಂಠದಿಂದ ಹಾಡುತ್ತಾ ಪ್ರಯಾಣಿಕರನ್ನು ರಂಜಿಸುತ್ತಿದ್ದ ರಾಣು ಸದ್ಯ ನ್ಯಾಷನಲ್ ಸೆನ್ಸೇಷನ್ ಆಗಿದ್ದಾರಂತೆ. ಇದಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಸಾಥ್ ನೀಡಿದ್ದಾರೆ. ರಾಣು ಹಾಡುತ್ತಿದ್ದ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಹಾಡನ್ನು ಕೇಳಿದ ಟ್ವೀಟಿಗರು ರಾಣು ಮಂಡಾಲ್​ ಕಂಠಕ್ಕೆ ಫಿದಾ ಆಗಿದ್ದರು. ಇದನ್ನು ನೋಡಿದ ಹಿಮೇಶ್​ ಅವರು ಈಗ ರಾಣು ಅವರಿಗೆ ಹಾಡಲು ಅವಕಾಶ ಕೊಟ್ಟಿದ್ದು, ಅವರಿಂದ ಒಂದು ಹಾಡನ್ನೂ ಹಾಡಿಸಿದ್ದಾರೆ. ‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ…. ‘ ಹಾಡನ್ನು ಹಿಮೇಶ್​ ಅವರು ರಾಣು ಅವರ ಕೈಯಲ್ಲಿ ಹಾಡಿಸಿದ್ದಾರೆ. ಈ ವಿಡಿಯೋ ಸಹ ಈಗ ವೈರಲ್​ ಆಗುತ್ತಿದೆ. ಅಲ್ಲದೇ ರಾಣು ಅವರಿಗೆ ಅನೇಕ ಅವಕಾಶಗಳು ಬರುತ್ತಿವೆ. ಟಿವಿಗಳು ಟ್ಯಾಲೆಂಟ್​ ಶೋಗಳಲ್ಲಿ ಭಾಗವಹಿಸುವಂತೆ ದುಂಬಾಲು ಬಿದ್ದಿವೆ. ಅಲ್ಲದೆ, ಮುಂಬಯಿ, ಕೇರಳ ಹಾಗೂ ಬಾಂಗ್ಲಾದೇಶದಿಂದಲೂ ಆಫರ್​ಗಳು ಬರುತ್ತಿವೆಯಂತೆ.

CG ARUN

ಮಾವನ ರೊಮ್ಯಾನ್ಸಿಗೆ ಸೊಸೆ ಸಿಡಿಮಿಡಿ!

Previous article

ರಾಕಿಂಗ್ ದಂಪತಿಗೆ ಕ್ಲಾಸ್ ತೆಗೆದುಕೊಂಡ ಕಮೆಂಟಿಗರು!

Next article

You may also like

Comments

Leave a reply

Your email address will not be published. Required fields are marked *