ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕನ್ನಡವೂ ಸೇರಿದಂತೆ ಕಾಲಿವುಡ್ಡು, ಟಾಲಿವುಡ್ಡುಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರ ವರ್ಕ್ ಔಟ್ ವಿಡಿಯೋವೊಂದು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೋಡುಗರ ಹುಬ್ಬೇರುವಂತೆ ಮಾಡುತ್ತಿದೆ.
https://www.instagram.com/p/ByjYBd9hJht/?utm_source=ig_web_copy_link
ಆರಂಭದಿಂದಲೂ ಜಿಮ್ ನಲ್ಲಿ ಬೆವರು ಸುರಿಸುತ್ತಿದ್ದ ರಶ್ಮಿಕಾ ಅವರು ಡಿಯರ್ ಕಾಮ್ರೇಡ್ ಚಿತ್ರದ ಪಾತ್ರಕ್ಕಾಗಿ ಕೊಂಚ ಹೆಚ್ಚಾಗಿಯೇ ದೇಹದಂಡಿಸಿದ್ದರು. ಚಿತ್ರದಲ್ಲಿ ರೋಶ್, ಕ್ರಿಕೆಟ್ ಆಟಗಾರ್ತಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದರು. ಸದ್ಯ ಜಿಮ್ನಾಸ್ಟಿಕ್ ಮಾದರಿಯ ಸ್ಟಂಟ್ ನ ಕೂಡ ರಶ್ಮಿಕಾ ಕಲಿಯುತ್ತಿದ್ದಾರೆ. ಸದ್ಯ ರಶ್ಮಿಕಾಳ ಬ್ಯಾಕ್ ಫ್ಲಿಪ್ ವಿಡಿಯೋ ವೈರಲ್ಲಾಗಿದೆ.
Comments