ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಅವರ ಲೇಟೆಸ್ಟ್ ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಬೋಲ್ಡ್ ಫೋಟೋಗಳಿಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದರೆ ಮತ್ತೂ ಕೆಲವರು ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ‘ತಲೈವಿ’, ‘ಮೈ ಏಂಜಲ್’, ‘ಲವ್ ಯೂ’ ಎಂದೆಲ್ಲ ಅಭಿಮಾನಿಗಳು ಮೆಚ್ಚಿದರೆ, ಇನ್ನು ಕೆಲವರು ‘ಬಟ್ಟೆ ಇಲ್ವಾ..’, ‘ಬರೀ ಶೋಕಿ ಆಯ್ತು’ ಎಂದೆಲ್ಲ ಕಾಲೆಳೆದಿದ್ದಾರೆ.
https://www.instagram.com/p/ByuKotsAC52/?utm_source=ig_web_copy_link
ಆದರೆ, ರಶ್ಮಿಕಾ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಒಂದರ ಮೇಲೊಂದರಂತೆ ನಾಲ್ಕೈದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜತೆಗಿನ ‘ಡಿಯರ್ ಕಾಮ್ರೆಡ್’ ಸಿನಿಮಾ ಬಿಡುಗಡೆ ಹಂತದಲ್ಲಿದ್ದರೆ, ‘ಪೊಗರು’, ‘ಭೀಷ್ಮ’, ‘ಸರಿಲೇರು ನೀಕೆವರು’ ಮುಂತಾದ ಸಿನಿಮಾಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.
Comments