ರಶ್ಮಿಕಾ ಮಂದಣ್ಣ ಜೊತೆ ಬ್ರೇಕಪ್ ಆದ ನಂತರ ಸಾಕ್ಷಾತ್ತು ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿಗೆ ಗಡ್ಡ ಬಿಟ್ಟುಕೊಂಡು ತಮ್ಮ ಪಾಡಿಗೆ ತಾವಿದ್ದಾರೆ. ರಕ್ಷಿತ್ ಈವರೆಗೆ ಯಾವತ್ತೂ ರಶ್ಮಿಕಾ ವಿರುದ್ಧ ಮಾಧ್ಯಮಗಳ ಮುಂದೆ ಒಂದೇ ಒಂದು ಮಾತೂ ಆಡಿಲ್ಲ. ಆದರೆ ರಕ್ಷಿತ್ ಗಾದ ಅನ್ಯಾಯದ ವಿರುದ್ಧ ಮಾತ್ರ ಕೆಲ ಮಂದಿ ದಣಿವರಿಯದೆ ಯುದ್ಧವನ್ನ ಮುಂದುವರೆಸಿದ್ದಾರೆ. ಇದರಿಂದಾಗಿಯೇ ರಶ್ಮಿಕಾ ನಿಂತಲ್ಲಿ ಕುಂತಲ್ಲಿ ಟ್ರೋಲ್ ಪೇಜುಗಳಿಗೆ ಆಹಾಪವಾಗಿ ಪೇಚಿಗೆ ಸಿಕ್ಕುತ್ತಿದ್ದಾಳೆ!

ರಶ್ಮಿಕಾ ಯಾವ ವಿಚಾರದಲ್ಲಿ ಸಿಕ್ಕಿ ಬೀಳುತ್ತಾಳೆಂಬುದನ್ನೇ ಕೆಲ ಮಂದಿ ಕಾದು ಕೂತಿದ್ದಾರೇನೋ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅಂಥಾದ್ದರಲ್ಲಿ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ವಿಜಯ್ ದೇವರಕೊಂಡನ ಜೊತೆ ರಶ್ಮಿಕಾ ಲಿಪ್ ಲಾಕ್ ಸೀನಿನಲ್ಲಿ ಕಾಣಿಸಿಕೊಂಡರೆ ಸುಮ್ಮನಿರೋದುಂಟಾ? ಇದರಂತೆಯೇ ಮೈ ಡಿಯರ್ ಕಾಮ್ರೆಡ್ ಚಿತ್ರದ ಟೀಸರ್ ಬಿಡುಗಡೆಯಾದಂದಿನಿಂದಲೇ ಟ್ರೋಲಿಗರು ರಶ್ಮಿಕಾಳ ನೆಮ್ಮದಿ ಕೆಡಿಸುತ್ತಿದ್ದಾರೆ. ಇದನ್ನು ಕಂಡು ಕೆರಳಿರೋ ರಶ್ಮಿಕಾ ರೋಷದಿಂದಲೇ ಕೆಲ ಮಾತುಗಳನ್ನಾಡಿದ್ದಾಳೆ!

ಡಿಯರ್ ಕಾಮ್ರೆಡ್ ಚಿತ್ರದ ಟೀಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅದು ಕರ್ನಾಟಕದಲ್ಲಿ ಮಾತ್ರ ರಶ್ಮಿಕಾಳ ಮುತ್ತಿನ ಕಾರಣದಿಂದಲೇ ಸದ್ದು ಮಾಡುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳ ತುಂಬಾ ಟೀಕೆಗಳೂ ಕೇಳಿ ಬರುತ್ತಿವೆ. ಈ ಹಿಂದೆ ಗೀತ ಗೋವಿಂದಂ ಚಿತ್ರದಲ್ಲಿಯೂ ಇಂಥಾ ಮುತ್ತಿನ ಸೀನುಗಳಿದ್ದವು. ಆ ಚಿತ್ರ ಹಿಟ್ ಆಗಿತ್ತು. ಇದೀಗ ಡಿಯರ್ ಕಾಮ್ರೆಡ್ ಕೂಡಾ ಹಿಟ್ ಆಗಲಿ ಅಂತಲೇ ರಶ್ಮಿಕಾ ಲಿಪ್ ಲಾಕ್ ಮಾಡಿದ್ದಾಳೆ ಎಂಬರ್ಥದಲ್ಲಿ ಟ್ರೋಲುಗಳು ಚಾಲ್ತಿಯಲ್ಲಿವೆ.

ಇದಕ್ಕೆ ರಶ್ಮಿಕಾ ಖಡಕ್ ಆದ ಉತ್ತರವನ್ನೇ ಕೊಟ್ಟಿದ್ದಾಳೆ. ಗೀತಾ ಗೋವಿಂಂ ಚಿತ್ರದಲ್ಲಿಯೂ ಕಥೆಗೆ ಅವಶ್ಯಕತೆ ಇದ್ದುದರಿಂದ ಅಂಥಾ ಸೀನ್ ಮಾಡಬೇಕಾಗಿತ್ತು. ಡಿಯರ್ ಕಾಮ್ರೆಡ್ ನಲ್ಲಿಯೂ ಅದೇ ವಾತಾವರಣವಿದೆ. ಆದ್ರೆ ಅದು ನನ್ನ ನಿರ್ಧಾರ. ಅದನ್ನು ಜಡ್ಜ್ ಮಾಡೋ ಅಧಿಕಾರ ಯಾರಿಗೂ ಇಲ್ಲ. ಇದೊಂದು ಸೀನಿನಿಂದ ಇಡೀ ಚಿತ್ರವನ್ನು ಅಳೆಯೋದು ಸರಿಯಲ್ಲ ಅಂತ ರೋಷದಿಂದಲೇ ತಿರುಗೇಟು ನೀಡಿದ್ದಾಳೆ!

CG ARUN

ಲಂಡನ್ ಲಂಬೋದರನ ಜೀವಾಳವೇ ಕಥೆ!

Previous article

ನಾಡು ನುಡಿಗಾಗಿ ಶ್ರಮಿಸಿದ ಕನ್ನಡಿಗರಿಗೆ ನಮ್ಮದೊಂದು ಸಲಾಂ

Next article

You may also like

Comments

Leave a reply

Your email address will not be published. Required fields are marked *