ಕಿರಿಕ್ ಪಾರ್ಟಿ ಸಿನಿಮಾ ಆದ ಬಳಿಕವಂತೂ ಬೇರೆಲ್ಲಾ ನಟ ನಟಿಯರಿಗೆ ಹೋಲಿಸಿದರೆ ನಾಯಕಿ ರಶ್ಮಿಕಾ ಮಂದಣ್ಣಗೆ ಒಂದು ಕೈ ಜಾಸ್ತಿಯೇ ಅವಕಾಶಗಳು ಒದಗಿ ಬರುತ್ತಲೇ ಇದೆ. ಕಿರಿಕ್ ಪಾರ್ಟಿಯ ನಂತರ ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಕನ್ನಡಕ್ಕೂ ಕಮ್ ಬ್ಯಾಕ್ ಆಗಿ ಚಮಕ್, ಯಜಮಾನ ಸಿನಿಮಾಗಳಲ್ಲೂ ನಟಿಸಿ ಕನ್ನಡದ ಹುಡುಗಿ ಎಂಬ ಹೆಗ್ಗಳಿಕೆಯನ್ನು ಪಡೆದರು.
ಮತ್ತೀಗ ರಶ್ಮಿಕಾಗೆ ಬಾಲಿವುಡ್ ನಿಂದಲೂ ಆಫರ್ ಒದಗಿಬಂದಿದೆಯಂತೆ. ಹೌದು. ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲು ಕನ್ನಡತಿ ರಶ್ಮಿಕಾಗೆ ಆಫರ್ ಬಂದಿದೆಯಂತೆ. ಸದ್ಯಕ್ಕೆ ರಶ್ಮಿಕಾ ಈ ಚಿತ್ರಕ್ಕೆ ಅಸ್ತು ಎನ್ನಬೇಕಾಗಿರುವುದಷ್ಟೇ ಬಾಕಿಯಿಂದೆಯಂತೆ. ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲದಿದ್ದರೂ ಇದೊಂದು ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ. ಆಗಸ್ಟ್ ತಿಂಗಳು ಸಿನಿಮಾ ಸೆಟ್ಟೇರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ರಶ್ಮಿಕಾಗೆ ಈ ಚಿತ್ರದಲ್ಲಿ ಜೊತೆಯಾಗಿ ಬಾಲಿವುಡ್ನ ಸಕ್ಸಸ್ಫುಲ್ ಹೀರೋ ರಣದೀಪ್ ಹೂಡ ನಟಿಸಲಿದ್ದಾರಂತೆ. ಒಂದು ವೇಳೆ ಇವರಿಬ್ರು ಜೊತೆಯಾದ್ರೆ ಸ್ಕ್ರೀನ್ ಮೇಲೆ ಈ ಪೇರ್ ಕಮಾಲು ಮಾಡೋದ್ರಲ್ಲಿ ಡೌಟೇ ಇಲ್ಲ. ಜತೆಗೆ ಅಭಿಮಾನಿಗಳಿಗೆ ರಸದೂಟವೇ ಸರಿ. ಸದ್ಯಕ್ಕೆ, ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗೆ ಅಭಿನಯಿಸಿರೋ ಡಿಯರ್ ಕಾಮ್ರೇಡ್ ಸಿನಿಮಾ ಇದೇ ಮೇ 31ಕ್ಕೆ ತೆರೆಕಾಣಲಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
No Comment! Be the first one.