ಗೆಲುವಿನ ಖುಷಿಯಲ್ಲಿರುವ ಪ್ರಿನ್ಸ್ ಮಹೇಶ್ ಬಾಬು, ಮಹರ್ಷಿ ಸಿನಿಮಾ ಸಕ್ಸಸ್ ನಿಂದಾಗಿ ಫುಲ್ ಖುಷಿಯಾಗಿದ್ದಾರೆ. ಈ ಮಧ್ಯೆ ತಮ್ಮ ಮನೆಯಲ್ಲಿ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಚಿತ್ರತಂಡ ಸೇರಿ ಆಪ್ತವರೆಯರನ್ನು ಆ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಶಾಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ ಈ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಂಡು ಪ್ರಿನ್ಸ್ ಮಹೇಶ್ ಜತೆಗೆ ಸೆಲ್ಪಿಗಳಿಗೆ ಫೋಸ್ ಕೊಟ್ಟಿದ್ದರು. ಆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಮಹೇಶ್ ಅವರ 26ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂಬ ಸುದ್ದಿ ಮತ್ತಷ್ಟು ಸದ್ದು ಮಾಡಿತ್ತು. ಈಗ ಆ ಸುದ್ದಿಗೆ ಜೀವ ಬಂದಿದ್ದು, ಮಹೇಶ್ ಬಾಬು ಅವರ 26ನೇ ಚಿತ್ರವನ್ನು ಪಟಾಸ್, ಎಫ್ 2 ಖ್ಯಾತಿಯ ಅನಿಲ್ ರವಿ ಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ಸಾಕಷ್ಟು ದಿನಗಳಿಂದ ಮಹೇಶ್ ಸಿನಿಮಾಗೆ ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ಧಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು. ಇದೀಗ ಎಲ್ಲವೂ ಫೈನಲ್ ಆಗಿದ್ದು, ಪ್ರಿನ್ಸ್ ಗೆ ನಾಯಕಿಯಾಗಿ ರಶ್ಮಿಕಾ ನಟಿಸುವುದು ಪಕ್ಕಾ ಆಗಿದೆ.
ಸದ್ಯ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ‘ಡಿಯರ್ ಕಾಮ್ರೆಡ್’ ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ನಾಯಕನಾಗಿ ನಟಿಸಲಿರುವ ಚಿತ್ರದ ಶೂಟಿಂಗ್ನಲ್ಲೂ ಅವರು ಭಾಗವಹಿಸಲಿದ್ದಾರೆ. ನಿತಿನ್ ಜತೆಯಲ್ಲಿ ‘ಭೀಷ್ಮ’, ಕನ್ನಡದಲ್ಲಿ ಧ್ರುವ ಸರ್ಜಾ ಜತೆ ‘ಪೊಗರು’ ಚಿತ್ರದ ಚಿತ್ರೀಕರಣದಲ್ಲಿಯೂ ರಶ್ಮಿಕಾ ಬ್ಯುಸಿಯಾಗಿದ್ದಾರೆ.
No Comment! Be the first one.