ಕಡಿಮೆ ಟೈಮ್ ನಲ್ಲಿ ಸೌತ್ ಇಂಡಿಯಾದಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಕಿರಿಕ್ ಪಾರ್ಟಿಯ ಮೂಲಕ ಕಾಲಿಟ್ಟವರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಮಿರ ಮಿರ ಮಿಂಚುತ್ತಿರುವ ರಶ್ಮಿಕಾ ನಟಿಸಿರುವ ಬಹುತೇಕ ಚಿತ್ರಗಳೆಲ್ಲವೂ ಬ್ಲಾಕ್ ಬಸ್ಟರ್ ಜತೆಗೆ ಸ್ಟಾರ್ ನಟರದ್ದೇ. ಸಂಭಾವನೆ ವಿಚಾರದಲ್ಲಿಯೂ ಹಿಂದೆ ಬೀಳದೇ ಚಿತ್ರವೊಂದಕ್ಕೆ 40 ಲಕ್ಷವನ್ನು ಪಡೆಯುತ್ತಿದ್ದ ರಶ್ಮಿಕಾ ಮಂದಣ್ಣ ಸದ್ಯ 80 ಲಕ್ಷಕ್ಕೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಮೇಲಾಗಿ ಈಗ ಕೈಲಿರುವ ಪ್ರಾಜೆಕ್ಟ್ ಗಳ ನಿರ್ಮಾಪಕರು 80 ಲಕ್ಷ ಕೊಡಲು ರೆಡಿಯಿದ್ದಾರಂತೆ. ಈಗಾಗಲೇ ರಶ್ಮಿಕಾ ಅಲ್ಲು ಅರ್ಜುನ್, ಮಹೇಶ್ ಬಾಬು, ನಿತೀನ್ ಜತೆಗೆ ನಟಿಸುವುದು ನಿಕ್ಕಿಯಾಗಿದೆ. ಅಲ್ಲದೇ ಗೀತ ಗೋವಿಂದಂ ನ ಯಶಸ್ಸು ಹಾಗೂ ಕನ್ನಡದ ಯಜಮಾನ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ, ಡಿಯರ್ ಕಾಮ್ರೇಡ್ ನ ಮೇಲಿರುವ ಅಭಿಮಾನಿಗಳ ನಿರೀಕ್ಷೆ ಇತ್ಯಾದಿ ರಶ್ಮಿಕಾ ಸಂಭಾವನೆ ಹೆಚ್ಚಸಿಕೊಳ್ಳಲು ಪ್ರಮುಖ ಕಾರಣವಂತೆ. ಒಪ್ಪಿಕೊಂಡ ಸಿನಿಮಾಗಳು ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದ್ದೇ ಆದರೆ ರಶ್ಮಿಕಾ ಸಂಭಾವನೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬಂದರೂ ಅಚ್ಚರಿಯೇನಿಲ್ಲ.
No Comment! Be the first one.