ಅಂತೂ ಇಂತು ರಶ್ಮಿಕಾ ಮಂದಣ್ಣ ಬಹು ಕಾಲದ ನಂತರ ಮಾಧ್ಯಮಗಳೊಂದಿಗೆ ಮುಖಾಮುಖಿಯಾಗಿದ್ದಾಳೆ. ತನ್ನ ಕನ್ನಡ ಸಿನಿಮಾಗಳ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾಳೆ. ಇದೇ ಸಂದರ್ಭದಲ್ಲಿ ಯಜಮಾನ ಚಿತ್ರದ ಚಿತ್ರೀಕರಣದ ಅನುಭವಗಳನ್ನು ತೆರೆದಿಡುತ್ತಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೂ ಮೆಚ್ಚಿಕೊಂಡು ಮಾತಾಡಿದ್ದಾಳೆ.
ಯಜಮಾನ ಚಿತ್ರೀಕರಣದ ಪ್ರತೀ ಘಳಿಗೆಯೂ ನೆನಪಿಟ್ಟುಕೊಳ್ಳುವಂತಿತ್ತು ಅಂದಿರೋ ರಶ್ಮಿಕಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ನಾಯಕಿಯಾಗಿ ನಟಿಸೋ ಆಫರ್ ಬಂದಾಗ ಮೊದಲು ಭಯವಾಗಿತ್ತಂತೆ. ಆದರೆ ಯಾವುದೇ ಹಮ್ಮು ಬಿಮ್ಮಿಲ್ಲದೇ ಎಲ್ಲರೊಂದಿಗೂ ಬೆರೆಯೋ ಮನಸ್ಥಿತಿಯ ದರ್ಶನ್ ಅವರನ್ನು ನೋಡಿ ನಿರಾಳವಾಗಿತ್ತಂತೆ. ಒಟ್ಟಾರೆಯಾಗಿ ದರ್ಶನ್ ಓರ್ವ ಸಿಹಿಯಾದ ಗುಣಗಳಿರೋ ವ್ಯಕ್ತಿ ಎಂಬುಡು ರಶ್ಮಿಕಾ ಅಭಿಪ್ರಾಯ.
ಇನ್ನುಳಿದಂತೆ ಈ ವರ್ಷ ತಾನು ನಟಿಸಿರೋ ಒಂದು ಚಿತ್ರವೂ ತೆರೆ ಕಾಣದ ಬಗ್ಗೆ ರಶ್ಮಿಕಾಗೆ ಬೇಸರವಿದೆಯಂತೆ. ಆದರೆ ಈ ಕೊರಗು ನೀಗುವಂತೆ ಮುಂದಿನ ವರ್ಷವಿಡೀ ತನ್ನ ಸಿನಿಮಾಗಳ ಸುಗ್ಗಿಯಾಗಲಿದೆ ಎಂಬ ಖುಷಿಯೂ ಆಕೆಯದ್ದು. ಯಜಮಾನ ಮುಂದಿನ ವರ್ಷದ ಆರಂಭದಲ್ಲಿಯೇ ಬಿಡುಗಡೆಯಾಗಲಿದೆ. ರಶ್ಮಿಕಾ ನಟಿಸಿರೋ ಪೊಗರು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದೂ ಕೂಡಾ ಮುಂದಿನ ವರ್ಷವೇ ಬಿಡುಗಡೆಯಾಗೋ ಸಾಧ್ಯತೆಗಳಿವೆ.
#