ನಂದ ಕೀಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸುತ್ತಿರೋ ಚಿತ್ರ ಪೊಗರು. ಆರಂಭ ಕಾಲದಿಂದಲೂ ಒಂದಲ್ಲಾ ಒಂದು ಕಾರಣದಿಂದ ಅಡೆತಡೆಗಳನ್ನು ಎದುರಿಸುತ್ತಾ ಬಂದಿದ್ದ ಈ ಚಿತ್ರ ಇದೀಗ ಭರ್ಜರಿಯಾಗಿಯೇ ಟೇಕಾಫ್ ಆಗಿದೆ. ಭರದಿಂದ ಚಿತ್ರೀಕರಣ ನಡೆಸುತ್ತಿರೋ ಈ ಚಿತ್ರದಲ್ಲಿ ಧ್ರೊಉವ ಸರ್ಜಾಗೆ ರಶ್ರಮಿಕಾ ಮಂದಣ್ಣ ನಾಯಕಿಯಾಗಿಯೂ ಆಯ್ಕೆಯಾಗಿದ್ದಾಳೆ!
ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕೈ ಕೊಟ್ಟ ನಂತರದಲ್ಲಿ ಕಲನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿಯೇ ದೂರಾದಂತಿದ್ದಳು. ಅತ್ತ ತೆಲುಗಿನಲ್ಲಿ ನೂರು ಕೋಟಿ ಕ್ಲಬ್ ಸೇರಿದ ಗೀತಾ ಗೋವಿದಂ ಚಿತ್ರದಲ್ಲಿ ನಟಿಸಿದ ನಂತರದಲ್ಲಿ ಈಕೆಯ ಕೊಬ್ಬು ಮಾಮೂಲಿಗಿಂತಲೂ ತುಸು ಹೆಚ್ಚಾಗಿಯೇ ಕಾಣಿಸಿತ್ತು. ಇದಲ್ಲದೇ ಕನ್ನಡ ಭಾಷೆಯನ್ನು ತಾತ್ಸಾರದಿಂದ ಕಾಣುತ್ತಾಳೆಂಬ ಕಾರಣದಿಂದಲೂ ಈಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು.
ಆ ನಂತರದಲ್ಲಿ ಟ್ರೋಲ್ ಹೈಕಳೆಲ್ಲ ಈಕೆಯನ್ನು ಥರ ಥರದಲ್ಲಿ ಕಾಡಿದ್ದರು. ಇಂಥಾ ಅದೆಷ್ಟೇ ವಿರೋಧಾಭಾಸಗಳಿದ್ದರೂ ತಾನು ಕನ್ನಡದಲ್ಲಿ ಕಾಲೂರಿ ನಿಲ್ಲಬಲ್ಲೆ ಎಂಬುದನ್ನು ಸಾಧಿಸಿ ತೋರಿಸೋ ಪೊಗರಿನೊಂದಿಗೇ ರಶ್ಮಿಕಾ ಪಗರು ಚಿತ್ರವನ್ನು ಒಪ್ಪಿಕೊಂಡಂತಿದೆ. ಆದರೆ ಅದೇನೇ ಮಾಡಿದರೂ ಕೂಡಾ ಕನ್ನಡಿಗರಿಗೆ ಈಕೆಯ ಮೇಲಿರೋ ಕೋಪ ಅಷ್ಟು ಸಲೀಸಾಗಿ ತಣ್ಣಗಾಗೋದು ಕಷ್ಟವಿದೆ!
#
No Comment! Be the first one.