ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ನಂತರದಲ್ಲಿ ರಶ್ಮಿಕಾ ಕಡೆಯಿಂದ ಕೆಲವೊಂದು ವ್ಯತಿರಿಕ್ತ ನಿಲುವುಗಳೇ ಪ್ರಕಟವಾಗುತ್ತಾ ಬಂದಿವೆ. ಆದರೆ ಇದು ಹಲವು ಬಾರಿ ತಪ್ಪು ತಿಳುವಳಿಕೆಗೂ ದಾರಿ ಮಾಡಿಕೊಟ್ಟಿದ್ದಿದೆ. ಪೋಸ್ಟರ್ ಮೂಲಕವೇ ಸೆಳೆದುಕೊಂಡಿದ್ದ ವೃತ್ರ ಚಿತ್ರದ ವಿಚಾರದಲ್ಲಿಯೂ ಅದೇ ಆಗಿತ್ತು.
ರಕ್ಷಿತ್ ಶೆಟ್ಟಿ ಕ್ಯಾಂಪಿನಲ್ಲಿ ಗುರುತಿಸಿಕೊಂಡಿದ್ದ ಗೌತಮ್ ಅಯ್ಯರ್ ನಿರ್ದೇಶನದ ಚಿತ್ರ ವೃತ್ರ. ಈ ಸಿನಿಮಾದಲ್ಲಿ ಕಿರಿಕ್ ಪಾರ್ಟಿಯ ನಂತರ ರಶ್ಮಿಕಾ ನಟಿಸುತ್ತಿದ್ದಾಳೆಂಬ ಬಗ್ಗೆ ಸುದ್ದಿಯಾಗಿತ್ತು. ಇದರಲ್ಲಿನ ರಶ್ಮಿಕಾ ಲುಕ್ಕೂ ಕೂಡಾ ಜಾಹೀರಾಗಿತ್ತು. ಅದು ಹೇಳಿಕೇಳಿ ರಶ್ಮಿಕಾ ಮಂದಣ್ಣ ಬಗ್ಗೆ ಭಾರೀ ಕ್ರೇಜ್ ಹುಟ್ಟಿಕೊಂಡಿದ್ದ ಕಾಲ. ಈ ಕಾರಣದಿಂದಲೇ ವೃತ್ರ ಚಿತ್ರ ಸಿಕ್ಕಾಪಟ್ಟೆ ಪ್ರಚಾರ ಪಡೆದುಕೊಂಡಿತ್ತು.
ಆದರೆ ರಶ್ಮಿಕಾ ರಕ್ಷಿತ್ ಜೊತೆ ಬ್ರೇಕಪ್ ವಿದ್ಯಮಾನದ ನಂತರ ಏಕಾಏಕಿ ಈ ಚಿತ್ರದಿಂದ ಹೊರ ನಡೆದಿದ್ದಳು. ಈ ಸಿನಿಮಾ ನಿರ್ದೇಶಕ ರಕ್ಷಿತ್ ಕ್ಯಾಂಪಿನವರಾದ್ದರಿಂದಲೇ ರಶ್ಮಿಕಾ ಈ ನಿಧಾರ ತೆಗೆದುಕೊಂಡಿದ್ದಾಳೆ ಎಂದೂ ಸುದ್ದಿಯಾಗಿತ್ತು. ಆದರೆ ಈ ನಿರ್ಧಾರಕ್ಕೆ ಡೇಟ್ಸ್ ಹೊಂದಾಣಿಕೆಯಾಗದಿರೋದೇ ಕಾರಣ ಅಂತ ರಶ್ಮಿಕಾ ಹೇಳಿಕೆ ಕೊಟ್ಟಿದ್ದೂ ಆಗಿದೆ. ಇದೀಗ ರಶ್ಮಿಕಾ ಬಿಟ್ಟು ಹೋಗಿದ್ದ ಜಾಗಕ್ಕೆ ಮಲೆಯಾಳಿ ಹುಡುಗಿ ನಿತ್ಯಶ್ರೀ ಎಂಬಾಕೆಯನ್ನ ಚಿತ್ರತಂಡ ನಾಯಕಿಯಾಗಿ ಸೇರಿಸಿಕೊಂಡಿದೆ.
ನಿತ್ಯಶ್ರೀ ಮಣಿರತ್ನಂ ನಿರ್ದೇಶನದ ಮಲೆಯಾಳಂ ಚಿತ್ರವೊಂದರಲ್ಲಿ ನಟಿಸಿದ್ದಾಳೆ. ಮತ್ತೆ ಕೆಲ ಚಿತ್ರಗಳ ನಿರ್ದೇಶನ ವಿಭಾಗದಲ್ಲಿಯೂ ಕೆಲಸ ಮಾಡಿದ್ದಾಳಂತೆ. ಇದರಲ್ಲಿ ನಿತ್ಯಶ್ರೀ ಚಾಣಾಕ್ಷ ತನಿಖಾಧಿಕಾರಿ ಇಂದಿರಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾಳೆ. ಈ ಪಾತ್ರದ ಬಗ್ಗೆ ಮೋಹಗೊಂಡಿರೋ ಅದಕ್ಕಾಗಿ ನಿತ್ಯಶ್ರೀ ತಯಾರಿ ಆರಂಭಿಸಿದ್ದಾಳಂತೆ!
#
No Comment! Be the first one.